ಚಾಮರಾಜನಗರ: ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆ ಅವಾಂತರ ಸೃಷ್ಟಿಸಿದೆ. ಗುಡುಗು ಸಿಡಿಲು ಸಹಿತ ಸುರಿದ ಮಳೆಯಿಂದ ರಸ್ತೆಗಳು ಜಲಾವೃತಗೊಂಡವು.
ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಮ್ಯಾನ್‌ಹೋಲ್‌ಗಳು ಹಾಗೂ ರಸ್ತೆಯ ಇಕ್ಕೆಲಗಳಲ್ಲಿರುವ ಚರಂಡಿ ಹೊಲಸು ರಸ್ತೆಗೆ ಹರಿದು ದುರ್ವಾಸನೆ ಬೀರುತ್ತಿತ್ತು. ನಗರದಲ್ಲಿ ದೊಡ್ಡರಸಿನಕೆರೆ ಕೊಳ ತುಂಬಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಚಿಕ್ಕಾಟಿಯಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು 122 ಮಿ.ಮೀ, ನಿಟ್ರೆಯಲ್ಲಿ 76.5 ಮಿ.ಮೀ, ಹೊರೆಯಾಳದಲ್ಲಿ 98.5 ಮಿ.ಮೀ, ಹನೂರು ತಾಲ್ಲೂಕಿನ ಮಣಗಳ್ಳಿಯಲ್ಲಿ 95 ಮಿ.ಮೀ, ಚಾಮರಾಜನಗರ ತಾಲ್ಲೂಕಿನ ಉಮ್ಮತ್ತೂರಿನಲ್ಲಿ 95 ಮಿ.ಮೀ, ಬದನಗುಪ್ಪೆಯಲ್ಲಿ 73 ಮಿ.ಮೀ, ಬಾಗಳಿಯಲ್ಲಿ 71.5 ಮಿ.ಮೀ, ಯಳಂದೂರು ತಾಲ್ಲೂಕಿನ ಹೊನ್ನೂರಿನಲ್ಲಿ 85.5 ಮಿ.ಮೀ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.