ADVERTISEMENT

ತಮಿಳು ಸಂಘದಿಂದ ರಾಜ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 15:42 IST
Last Updated 2 ನವೆಂಬರ್ 2021, 15:42 IST
ಜಿಲ್ಲಾ ತಮಿಳು ಸಂಘದ ಅಧ್ಯಕ್ಷ ಚಿನ್ನಸ್ವಾಮಿ ನಾಡ ಧ್ವಜಾರೋಹಣ ನೆರವೇರಿಸಿದರು
ಜಿಲ್ಲಾ ತಮಿಳು ಸಂಘದ ಅಧ್ಯಕ್ಷ ಚಿನ್ನಸ್ವಾಮಿ ನಾಡ ಧ್ವಜಾರೋಹಣ ನೆರವೇರಿಸಿದರು   

ಚಾಮರಾಜನಗರ: ಜಿಲ್ಲಾ ತಮಿಳು ಸಂಘದ ವತಿಯಿಂದ ಮಂಗಳವಾರ ನಗರದಲ್ಲಿ 66ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.

ಸೋಮವಾರಪೇಟೆಯ ಬಳಿ ಇರುವ ತಮಿಳು ಸಂಘದ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪಿ.ಎನ್‌.ಚಿನ್ನಸ್ವಾಮಿ ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ನಂತರ ಮಾತನಾಡಿದ ಅವರು, ‘ತಮಿಳರು ಕನ್ನಡದ ಶಾಂತಿ ತೋಟದಲ್ಲಿ ಕನ್ನಡಿಗರೊಂದಿಗೆ ಅಣ್ಣ–ತಮ್ಮಂದಿರಂತೆ ಬದುಕುತ್ತಿದ್ದೇವೆ’ ಎಂದರು.

ADVERTISEMENT

ಸಂಘದ ಕಾರ್ಯದರ್ಶಿ ಜಗದೀಶ್‌ ಮಾತನಾಡಿ, ‘ಕನ್ನಡದ ಜಲ, ನೆಲ, ಭಾಷೆಗೆ ಧಕ್ಕೆ ಉಂಟಾದಾಗ ನಾವೂ ಬೀದಿಗೆ ಇಳಿದು ಕನ್ನಡದ ಪರ ಹೋರಾಟ ಮಾಡಿದ್ದೇವೆ’ ಎಂದು ಹೇಳಿದರು.

‘ನಾವೆಲ್ಲ ಬಹಳ ವರ್ಷಗಳಿಂದ ಕನ್ನಡದ ನೆಲದಲ್ಲೇ ಬದುಕುತ್ತಿದ್ದು ಕನ್ನಡಿಗರಾಗಿದ್ದೇವೆ.ಕನ್ನಡದ ಬಗ್ಗೆ ನಮಗೂ ಅಭಿಮಾನ ಇದೆ’ ಎಂದು ಅವರು ತಿಳಿಸಿದರು.

ಪಟ್ಟಿಯಪ್ಪನ್, ತಂಗವೇಲು, ತಂಗಮಣಿ, ಎಸ್.ವಿ.ಟಿ.ಮಾರಪ್ಪ ಗೌಂಡರ್, ಯೂನಿವರ್ಸ್ ಶಾಲೆಯ ಸುಬ್ರಮಣ್ಯಂ, ಶೇಖರ್, ಸುಬ್ರಮಣಿ, ಮಣಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.