ADVERTISEMENT

ಚಾಮರಾಜನಗರ | ಪಡಿತರ ಚೀಟಿ ಅಡಮಾನ: ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಗೆ ತೊಡಕು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 19:42 IST
Last Updated 20 ಅಕ್ಟೋಬರ್ 2025, 19:42 IST
ಪಡಿತರ ಚೀಟಿ
(ಸಾಂದರ್ಭಿಕ ಚಿತ್ರ)
ಪಡಿತರ ಚೀಟಿ (ಸಾಂದರ್ಭಿಕ ಚಿತ್ರ)   

ಚಾಮರಾಜನಗರ: ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕೆಲವರು ಪಡಿತರ ಚೀಟಿ ಅಡವಿಟ್ಟು ಉದ್ಯೋಗ ಅರಸಿ ಬೇರೆ ಜಿಲ್ಲೆಗಳಿಗೆ ತೆರಳಿರುವುದು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಅಡ್ಡಿಯಾಗಿದೆ.

ಯಳಂದೂರು ತಾಲ್ಲೂಕಿನ ಕೃಷ್ಣಾಪುರ, ಗಣಗನೂರು, ದಾಸನುಂಡಿ, ಗುಂಬಳ್ಳಿ, ಕೋಮಾರನಪುರ ಸೇರಿ ಹಲವು ಗ್ರಾಮಗಳಲ್ಲಿ ಈ ಸಮಸ್ಯೆ ಕಾಣಿಸಿದೆ. ಜನರು  ಬೆಂಗಳೂರು, ಮೈಸೂರು ಜಿಲ್ಲೆಗಳಿಗೆ ತೆರಳಿದ್ದಾರೆ.

ಕೆಲವರು ನ್ಯಾಯಬೆಲೆ ಅಂಗಡಿಗಳಿಗೆ ಹಾಗೂ ಉಳ್ಳವರ ಬಳಿ ಪಡಿತರ ಚೀಟಿಯನ್ನು ಅಡವಿಟ್ಟಿದ್ದು ತಿಂಗಳಿಗೊಮ್ಮೆ ಬಯೊಮೆಟ್ರಿಕ್‌ ನೀಡಿ ಕೂಲಿಗೆ ಮರಳುತ್ತಿದ್ದಾರೆ. ಆ ಕುಟುಂಬಗಳ ಸದಸ್ಯರನ್ನು ಗುರುತಿಸಿ ಸಮೀಕ್ಷೆಗೆ ಒಳಪಡಿಸುವುದು ಸವಾಲಾಗಿದೆ ಎಂದು ಸಮೀಕ್ಷಕರೊಬ್ಬರು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.