
ಯಳಂದೂರು: ತಾಲ್ಲೂಕಿನ ಅಂಬಳೆ ಸಮೀಪದ ಗೂಳಿಪುರ ರಸ್ತೆಯಲ್ಲಿ ಕಟಾವಿಗೆ ಬಂದಿದ್ದ ಕಬ್ಬಿನ ಗದ್ದೆಗೆ ಬುಧವಾರ ಮಧ್ಯಾಹ್ನ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ತಗುಲಿ ಕಬ್ಬಿನ ಬೆಳೆ ಸುಟ್ಟುಹೋಗಿದೆ.
ಮಧ್ಯಾಹ್ನ ಬಿಸಿಲಿನ ತಾಪವೂ ಹೆಚ್ಚಾಗಿತ್ತು. ಸೂಲಂಗಿ ಕಬ್ಬು ವಿದ್ಯುತ್ ತಂತಿಗೆ ಸ್ಪರ್ಶಿಸುತ್ತಿತ್ತು. ಈ ಸಮಯದಲ್ಲಿ ಬೆಂಕಿಯ ಕಿಡಿ ಬೆಳೆಗೆ ತಗುಲಿ ಹೊಗೆ ಆವರಿಸಿ ಲಕ್ಷಾಂತರ ರೂಪಾಯಿಯ ಬೆಳೆ ಹಾನಿಯಾಗಿದೆ ಎಂದು ಕೃಷಿಕ ಬಸವರಾಜು ಹೇಳಿದರು.
ರೈತರಲ್ಲಿ ಮನವಿ: ಕೃಷಿ ಜಮೀನಿನಲ್ಲಿ ವಿದ್ಯುತ್ ಹಾದು ಹೋಗಿರುವ ಮಾರ್ಗದಲ್ಲಿ ಬೆಳೆದಿರುವ ಒಣ ಪೊದೆಗಳು ಹಾಗೂ ಸೂಲಂಗಿ ಕಬ್ಬನ್ನು ತೆಗೆಯಬೇಕು. ಕಸ ಕಡ್ಡಿ ಶೇಖರವಾಗದಂತೆ ಎಚ್ಚರವಹಿಸಬೇಕು. ಇದರಿಂದ ಅಗ್ನಿ ಅವಘಡ ತಪ್ಪಿಸಲು ಸಾಧ್ಯ ಎಂದು ಸಂತೇಮರಹಳ್ಳಿ ಸೆಸ್ಕ್ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.