ಚಾಮರಾಜನಗರ: ನಗರಸಭೆಯ 12ನೇ ವಾರ್ಡ್‌ನ ಕೆ.ಪಿ.ಮೊಹಲ್ಲಾದಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ ಎರಡು ಮಕ್ಕಳಿಗೆ ತೀವ್ರವಾಗಿ ಗಾಯಗಳಾಗಿವೆ.
ಗುರುವಾರ ಈ ಘಟನೆ ನಡೆದಿದೆ. ಆರ್ಸಲನ್ (6) ಹಾಗೂ ಯಾಸೀನ್ (3) ಗಾಯಗೊಂಡ ಮಕ್ಕಳು. ನಾಯಿಗಳ ದಾಳಿಯಿಂದಾಗಿ ಬಾಲಕನೊಬ್ಬನ ಮುಖದ ಮೇಲೆ ಆಳವಾದ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಪೋಷಕರು ಆತನನ್ನು ಮೈಸೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸ್ಥಳೀಯ ನಗರಸಭಾ ಸದಸ್ಯ ಅಬ್ರಾರ್ ಅಹಮದ್ ಅವರು, ‘ಗುರುವಾರ ಈ ಘಟನೆ ನಡೆದಿದೆ. ಮಕ್ಕಳು ಮನೆಯ ಎದುರು ಆಟವಾಡುತ್ತಿದ್ದಾಗ ಬೀದಿ ನಾಯಿಗಳು ದಾಳಿ ಮಾಡಿವೆ. ಒಬ್ಬ ಬಾಲಕನಿಗೆ ತೀವ್ರವಾದ ಗಾಯಗಳಾಗಿವೆ. ನಗರ ಸಭಾ ಆಯುಕ್ತರು ಹಾಗೂ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ.ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.