
ಪ್ರಜಾವಾಣಿ ವಾರ್ತೆ2018, ಡಿ.14ರಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದ ಕಿಚ್‌ಗತ್ ಮಾರಮ್ಮನ ದೇವಾಲಯದಲ್ಲಿ ವಿಷಪ್ರಸಾದ ಸೇವಿಸಿ ಧಾರುಣವಾಗಿ ಮೃತಪಟ್ಟ ಪ್ರಕರಣ ಇನ್ನೂ ಜೀವಂತವಾಗಿದೆ. ಪ್ರಕರಣದಲ್ಲಿ ಮೃತಪಟ್ಟ ಕುಟುಂಬದವರಿಗೆ ನೀಡಲಾಗಿದ್ದ ಭರವಸೆ ಪೂರ್ಣಗೊಂಡಿಲ್ಲ ಎನ್ನವುದು ಒಂದೆಡೆಯಾದರೆ, ಇನ್ನೊಂದೆಡೆ ಸಂಬಂಧಿಕರನ್ನು ಕಳೆದುಕೊಂಡ ಕುಟುಂಬದವರ ಬದುಕು ಹಾಗೂ ಘಟನೆಯಲ್ಲಿ ಬದುಕುಳಿದವರ ಬದುಕು ಮೂರಾಬಟ್ಟೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.