ADVERTISEMENT

ಸೂರ್ಯಕಾಂತಿ ಮಾರಾಟ: 5 ಮಂದಿ ಹೊರತಾಗಿ ಎಲ್ಲರಿಗೂ ಹಣ ಜಮೆ – ಆರ್.ಎಸ್.ನಾಗರಾಜು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 2:04 IST
Last Updated 4 ಫೆಬ್ರುವರಿ 2026, 2:04 IST
   

ಗುಂಡ್ಲುಪೇಟೆ: ‘ತಾಂತ್ರಿಕ ಕಾರಣದಿಂದ ಐವರು ರೈತರ ಹೊರತಾಗಿ ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಬೆಂಬಲ ಬೆಲೆಯಡಿ ಸೂರ್ಯಕಾಂತಿ ಮಾರಾಟ ಮಾಡಿದ ರೈತರ ಖಾತೆಗಳಿಗೆ ಹಣ ಜಮೆಯಾಗಿದೆ’ ಎಂದು ಎಪಿಎಂಸಿ ಅಧ್ಯಕ್ಷ ಆರ್.ಎಸ್.ನಾಗರಾಜು ತಿಳಿಸಿದ್ದಾರೆ.

‘ಗುಂಡ್ಲುಪೇಟೆ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಮಾರಾಟ ಮಾಡಿದ 646 ರೈತರ ಪೈಕಿ 4 ಹಾಗೂ ತೆರಕಣಾಂಬಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ 357 ರೈತರ ಪೈಕಿ ಒಬ್ಬರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದೇ ಹಣ ಪಾವತಿಯಾಗಿಲ್ಲ. ಹಕ್ಕಲಪುರ ಗ್ರಾಮದ ರೈತರ ಸಿದ್ದಪ್ಪ ಅವರು ವಾರದ ಹಿಂದೆ ಬ್ಯಾಂಕ್ ಖಾತೆಗೆ ಆಧಾರ ಜೋಡಣೆ ಮಾಡಿಸಿದ್ದಾರೆ. ಇಲ್ಲವಾದಲ್ಲಿ ಇತರೆ ರೈತರ ಜತೆಗೆ ಎನ್.ಸಿ.ಸಿ.ಎಫ್‌ನಿಂದ ಇವರ ಖಾತೆಗೂ ಹಣ ಪಾವತಿಯಾಗುತಿತ್ತು. ಆದ್ದರಿಂದ ಹಣ ಪಾವತಿಯಲ್ಲಿ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಯಾವುದೇ ಲೋಪವಾಗಿಲ್ಲ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT