ADVERTISEMENT

ಯಳಂದೂರು ಪಟ್ಟಣ ಆವರಿಸಿದ ಸುವರ್ಣಾವತಿ: 50 ವರ್ಷಗಳ ಬಳಿಕ ನೆರೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 4:40 IST
Last Updated 6 ಸೆಪ್ಟೆಂಬರ್ 2022, 4:40 IST
ಯಳಂದೂರಿನಲ್ಲಿ ಜಲಾವೃತಗೊಂಡ ರಸ್ತೆಯಲ್ಲಿ ಸಂಚರಿಸಿದ ಬಸ್
ಯಳಂದೂರಿನಲ್ಲಿ ಜಲಾವೃತಗೊಂಡ ರಸ್ತೆಯಲ್ಲಿ ಸಂಚರಿಸಿದ ಬಸ್   

ಯಳಂದೂರು:ಸುವರ್ಣಾವತಿ ನದಿ ಉಕ್ಕೇರಿದ ಪರಿಣಾಮ ಪಟ್ಟಣದ ಹಲವು ಭಾಗ ಮಂಗಳವಾರ ಬೆಳಿಗ್ಗೆ ಜಲಾವೃತವಾಗಿದೆ.

ನಸುಕಿನಲ್ಲಿ ಮನೆಯಿಂದ ಹೊರ ಬಂದ ಜನರು ನೀರು ಹೆದ್ದಾರಿಯಲ್ಲಿ ತುಂಬಿ ಹರಿಯುತ್ತಿರುವುದನ್ನು ಕಂಡು ಅವಕ್ಕಾದರು. ರಾಜ ಕಾಲುವೆ, ಕಚೇರಿಗಳು, ಜಲಾವೃತವಾಗಿದ್ದು ಬಸ್ ಗಳು ವಾಹನಗಳು ತುಂಬಿ ಹರಿಯುತ್ತಿದ್ದ ನೀರಿನ ನಡುವೆ ಸಾಗುತ್ತಿದ್ದ ದೃಶ್ಯ ಕಂಡು ಬಂದಿತು.

'ನೆರೆ 50 ವರ್ಷಗಳ ನಂತರ ಪಟ್ಟಣವನ್ನು ಆವರಿಸಿದೆ. ಬಹುತೇಕ ಬಳೆಪೇಟೆ ಮತ್ತು ಪಟ್ಟಣದ ಗೌತಮ್ ಬಡಾವಣೆಯ ಮನೆಗಳ ಸುತ್ತ ನೀರು ತುಂಬಿ ಹರಿಯುತ್ತಿದೆ' ಎಂದು ಪಟ್ಟಣ ಪಂಚಾಯಿತಿ ಸದಸ್ಯ ಮಹೇಶ್ ಹೇಳಿದರು.

'ಕಂದಹಳ್ಳಿ ಸಮೀಪ ಸುವರ್ಣಾವತಿ ನದಿ ಸಮೀಪ ಹೆಚ್ಚಿನ ನೀರು ರಭಸವಾಗಿ ಹರಿಯುತ್ತಿದೆ. ನೀರು ಪಟ್ಟಣದ ಹಲವು ಬಡಾವಣೆಗೆ ನುಗ್ಗಲು ಕಾರಣವಾಗಿದೆ' ಎಂದು ಪಟ್ಟಣದ ಸುರೇಶ್ ಮಾಹಿತಿ ನೀಡಿದರು.

ADVERTISEMENT

'ತಾಲ್ಲೂಕು ಆಡಳಿತದ ವತಿಯಿಂದ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ನೆರೆ ಪೀಡಿತ ಗ್ರಾಮಗಳ ಬಳಿ ಸಿಬ್ಬಂದಿ ನಿಯೋಜಿಸಲಾಗಿದೆ. ಯಾವುದೇ ಆತಂಕ ಬೇಡ' ಎಂದು ತಹಶೀಲ್ದಾರ್ ಕೆ. ಬಿ. ಆನಂದಪ್ಪ ನಾಯಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.