
ಪ್ರಜಾವಾಣಿ ವಾರ್ತೆ
ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದ ಗಡಿ ಪ್ರದೇಶ ಮಸಣಗುಡಿಯಲ್ಲಿ ರಸ್ತೆಬದಿ ವಾಹನ ಸವಾರರಿಗೆ ಹುಲಿ ದರ್ಶನವಾಗಿದ್ದು, ಭಾರಿ ಗಾತ್ರದ ಹುಲಿ ಕಂಡು ವಾಹನ ಸವಾರರು ರೋಮಾಂಚನಗೊಂಡಿದ್ದಾರೆ.
ರಸ್ತೆ ಬದಿ ಹುಲಿ ಹಾದು ಹೋಗುವುದನ್ನು ಕಂಡ ವಾಹನ ಸವಾರರು ಮೊಬೈಲ್ ಕ್ಯಾಮೆರಾದಲ್ಲಿ ಅದನ್ನು ಸೆರೆ ಹಿಡಿದಿದ್ದಾರೆ. ಕೆಲ ವಾಹನ ಸವಾರರು ಹೆಬ್ಬುಲಿ ಕಂಡು ಸಂತಸಗೊಂಡರೆ, ಮತ್ತೆ ಕೆಲವರು ಗಾಬರಿ ವ್ಯಕ್ತಪಡಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.