ADVERTISEMENT

ಚಾಮರಾಜನಗರ: ಮತ್ತಷ್ಟು ಕುಸಿದ ಸಕ್ರಿಯ ಪ್ರಕರಣಗಳು

ಜಿಲ್ಲೆಯಲ್ಲಿ 1,329 ಸೋಂಕಿತರು, 238 ಮಂದಿ ಗುಣಮುಖ, 160 ಹೊಸ ಪ್ರಕರಣ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 5:50 IST
Last Updated 14 ಜೂನ್ 2021, 5:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,329ಕ್ಕೆ ಇಳಿದಿದೆ. ಶುಕ್ರವಾರ 228 ಮಂದಿ ಗುಣಮುಖರಾಗಿದ್ದಾರೆ. 160 ಹೊಸ ಪ್ರಕರಣಗಳು ದೃಢಪಟ್ಟಿವೆ.

ಆರು ಮಂದಿ ಮೃತಟ್ಟಿದ್ದಾರೆ. ಮೂವರು ಕೋವಿಡ್‌ನಿಂದ, ಉಳಿದ ಮೂವರು ಕೋವಿಡ್‌ಯೇತರ ಕಾರಣಕ್ಕೆ ಮೃತಪಟ್ಟಿದೆ.

ಐಸಿಯು ರೋಗಿಗಳ ಸಂಖ್ಯೆ ಕುಸಿತ:ಸದ್ಯ ಜಿಲ್ಲೆಯಲ್ಲಿ 1,329ರ ಸೋಂಕಿತರಲ್ಲಿ 49 ಮಂದಿ ಐಸಿಯುನಲ್ಲಿದ್ದಾರೆ. ದಿನದಿಂದ ದಿನಕ್ಕೆ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. 61 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಉಳಿದವರು ಆಸ್ಪತ್ರೆ, ಕೋವಿಡ್‌ ಕೇರ್ ಸೆಂಟರ್‌ಗಳಲ್ಲಿದ್ದಾರೆ.

ADVERTISEMENT

ಭಾನುವಾರದ ಅಂಕಿ ಅಂಶಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ವರದಿಯಾದ ಪ್ರಕರಣಗಳ ಸಂಖ್ಯೆ 29,503ಕ್ಕೆ ಏರಿದೆ. ಗುಣಮುಖರ ಸಂಖ್ಯೆ 27,692ಕ್ಕೆ ತಲುಪಿದೆ.

ಭಾನುವಾರ 1,791 ಕೋವಿಡ್‌ ಪರೀಕ್ಷಾ ವರದಿಗಳು ಬಂದಿದ್ದು, 1,631 ವರದಿಗಳು ನೆಗೆಟಿವ್‌ ಬಂದಿವೆ. 160 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ.

ದೃಢಪಟ್ಟ 160 ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನ 66, ಗುಂಡ್ಲುಪೇಟೆ ತಾಲ್ಲೂಕಿನ 19, ಕೊಳ್ಳೇಗಾಲ ತಾಲ್ಲೂಕಿನ 30, ಹನೂರಿನ 29, ಯಳಂದೂರು ತಾಲ್ಲೂಕಿನ 14 ಹಾಗೂ ಹೊರ ಜಿಲ್ಲೆಗಳ ಎರಡು ಪ್ರಕರಣಗಳು ಸೇರಿವೆ.

ಗುಣಮುಖರಾದ 238 ಮಂದಿಯಲ್ಲಿ ಎಂಟು ಮಂದಿ ಆಸ್ಪತ್ರೆಯಲ್ಲಿದ್ದರು. 217 ಮಂದಿ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಹಾಗೂ 13 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.