ADVERTISEMENT

ಮಹದೇಶ್ವರ ಬೆಟ್ಟ | ವಿಜಯದಶಮಿ: ಮಹದೇಶ್ವರರಿಗೆ ವಿಶೇಷ ‌ಪೂಜೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2022, 15:58 IST
Last Updated 5 ಅಕ್ಟೋಬರ್ 2022, 15:58 IST
ವಿಜಯ ದಶಮಿ ದಿನವಾದ ಬುಧವಾರ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದ ಚಿನ್ನದ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು
ವಿಜಯ ದಶಮಿ ದಿನವಾದ ಬುಧವಾರ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದ ಚಿನ್ನದ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು   

ಮಹದೇಶ್ವರ ಬೆಟ್ಟ: ಇಲ್ಲಿ‌ನ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ವಿಜಯದಶಮಿ ಅಂಗವಾಗಿ ಬುಧವಾರ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ಮಹದೇಶ್ವರ ಸ್ವಾಮಿಗೆ ಬುಧವಾರ ಬೆಳಿಗ್ಗೆ ಹೂವಿನ ಜೊತೆಗೆ, ಮೈಸೂರಿನ ರಾಜ ವಂಶಸ್ಥರು ನೀಡಿದ್ದ ಒಡವೆಗಳನ್ನು ಹಾಕಿ ವಿಶಷ ಅಲಂಕಾರ ಮಾಡಲಾಗಿತ್ತು. ಮಹಾ ಮಂಗಳಾರತಿಯನ್ನು ಬೆಳಗಿದ ಬಳಿಕ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಬಿಳಿಕುದುರೆವಾಹನಉತ್ಸವವನ್ನು ನೆರವೇರಿಸಲಾಯಿತು.

ಸಾವಿರಾರು ಭಕ್ತರು ಭಾಗಿ: ಆಯುಧಪೂಜೆ ದಿನವಾದ ಮಂಗಳವಾರ ಹಾಗೂ ವಿಯದಶಮಿ ದಿನವಾದ ಬುಧವಾರ ಬೆಟ್ಟಕ್ಕೆ ಸಾವಿರಾರು ಭಕ್ತರು ಭೇಟಿ ಮಹದೇಶ್ವರ ಸ್ವಾಮಿ ದರ್ಶನ ಮಾಡಿ ವಿವಿಧ ಹರಕೆಗಳನ್ನು ತೀರಿಸಿದರು.

ADVERTISEMENT

ಮಂಗಳವಾರ ಭಕ್ತರ ಸಂಖ್ಯೆ ಕಡಿಮೆ ಇತ್ತು. ಬುಧವಾರ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.

ಜಿಲ್ಲೆಯ ನಾನಾ ಭಾಗಗಳಿಂದ ಬರುವ ಭಕ್ತರು ಮಹಾನವಮಿಯಂದು ತಾವು ಬೆಳೆದ ಮೊದಲ ದವಸ ಧಾನ್ಯಗಳನ್ನು ಮುಡಿಪಾಗಿಟ್ಟು ದಾಸೋಹಕ್ಕೆ ನೀಡಿ ಪ್ರಸಾದವನ್ನು ಸ್ವೀಕರಿಸುತ್ತಾರೆ. ರಾತ್ರಿ ದೇವಾಲಯದ ಆವರಣದಲ್ಲೇ ತಂಗಿದ್ದು, ವಿಜಯ ಧಶಮಿಯಂದು ಜರುಗುವ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಬುಧವಾರ ರಾತ್ರಿ ನಡೆದ ಚಿನ್ನದ ತೇರಿನ ಉತ್ಸವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.