ಹಂದಿ
ಗುಂಡ್ಲುಪೇಟೆ: ಕಾಡು ಹಂದಿ ದಾಳಿ ನಡೆಸಿದ ಪರಿಣಾಮ ರೈತ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಭೀಮನಬೀಡು ಗ್ರಾಮದಲ್ಲಿ ಶನಿವಾರ ನಡೆದಿದೆ.
ಭೀಮನಬೀಡು ಗ್ರಾಮದ ಗೋಪಾಲಶೆಟ್ಟಿ ಗಾಯಗೊಂಡ ರೈತ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಹಂದಿಯೊಂದು ದಾಳಿ ನಡೆಸಿ ಕೋರೆ ಹಲ್ಲುಗಳಿಂದ ರೈತನ ಎಡಗಾಲಿಗೆ ತಿವಿದು ಗಂಭೀರ ಗಾಯ ಮಾಡಿದೆ. ಕೂಡಲೇ ಸ್ಥಳೀಯ ರೈತರು ಗಾಯಾಳುವನ್ನು ಗುಂಡ್ಲುಪೇಟೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಹೀಗಿದ್ದರೂ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಗಾಯಳುವಿನ ಆರೋಗ್ಯ ವಿಚಾರಿಸಿ ಘಟನೆ ಮಾಹಿತಿ ಪಡೆದಿಲ್ಲ. ರೈತರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಪರಿಹಾರಕ್ಕೆ ಒತ್ತಾಯ: ರೈತ ಗೋಪಾಲಶೆಟ್ಟಿ ಎಡಗಾಲಿಗೆ ಕಾಡು ಹಂದಿ ದಾಳಿಯಿಂದ ತೀವ್ರಗಾಯವಾಗಿದೆ. ಸಂಬಂಧ ಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಚಿಕಿತ್ಸೆ ಕೊಡಿಸಿ ವೆಚ್ಚ ಭರಿಸುವ ಜೊತೆಗೆ ಪರಿಹಾರ ನೀಡಬೇಕು ಎಂದು ಸಾಮೂಹಿಕ ರಾಜ್ಯ ರೈತ ಸಂಘಟನೆ ಮುಖಂಡರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.