ADVERTISEMENT

ಕಾಡಂಚಿನ ಪಚ್ಚೆದೊಡ್ಡಿಯ ಸರ್ಕಾರಿ ಶಾಲೆಗೆ ಕಾಡಾನೆ ದಾಳಿ: ಶಾಲೆ ಗೇಟ್ ಹಾನಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 6:41 IST
Last Updated 16 ಡಿಸೆಂಬರ್ 2025, 6:41 IST
ಹನೂರು ತಾಲ್ಲೂಕಿನ ಪಚ್ಚೆದೊಡ್ಡಿಯ ಕಾಡಾನೆ ದಾಳಿಗೆ ಶಾಲೆ ಮುಂಭಾಗದ ಗೇಟ್ ಮುರಿದಿರುವುದು
ಹನೂರು ತಾಲ್ಲೂಕಿನ ಪಚ್ಚೆದೊಡ್ಡಿಯ ಕಾಡಾನೆ ದಾಳಿಗೆ ಶಾಲೆ ಮುಂಭಾಗದ ಗೇಟ್ ಮುರಿದಿರುವುದು   

ಹನೂರು: ತಾಲ್ಲೂಕಿನ ಕಾಡಂಚಿನ ಪಚ್ಚೆದೊಡ್ಡಿಯ ಸರ್ಕಾರಿ ಶಾಲೆಗೆ ಕಾಡಾನೆಯೊಂದು ನುಗ್ಗಿ ಶಾಲಾ ಮುಂಭಾಗದ ಗೇಟ್ ನಾಶಗೊಳಿಸಿದೆ.

ಪಚ್ಚೆದೊಡ್ಡಿಯ ಶಾಲೆಯ ಮುಖ್ಯ ಗೇಟ್ ಮುರಿದು ಒಳನುಗ್ಗಿರುವ ಕಾಡಾನೆ, ಆವರಣದಲ್ಲಿ ಅಳವಡಿಸಲಾಗಿದ್ದ ನೀರಿನ ಪೈಪ್‌ ಸೇರಿದಂತೆ ಹಲವು ಪರಿಕರ ತುಳಿದು ಧ್ವಂಸಗೊಳಿಸಿದೆ.

‘ಇತ್ತೀಚೆಗೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಅದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಈ ಭಾಗದಲ್ಲಿ ಕಾಡುಪ್ರಾಣಿಗಳ ನಿಯಂತ್ರಣ ಮಾಡಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.