ಯಳಂದೂರು: ಸಮೀಪದ ಇರಸವಾಡಿ, ಮಸಣಾಪುರ, ಮೂಕಹಳ್ಳಿ ಗ್ರಾಮಗಳಲ್ಲಿ ಈಚೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಪರಿಸರ ಮತ್ತು ಸಾಮಾಜಿಕ ಸಮಸ್ಯೆ ಬಿಂಬಿಸುವ ವಿಷಯಗಳ ಜಾಗೃತಿ ಕಾರ್ಯಕ್ರಮದ ಬೀದಿ ನಾಟಕಗಳನ್ನು ಪ್ರದರ್ಶಿಸಿತು.
ಯೋಜನಾಧಿಕಾರಿ ಆನಂದ್ ಮಾತನಾಡಿ. ‘ಶಿಕ್ಷಣ, ಆರೋಗ್ಯ, ಸ್ವಚ್ಚತೆ, ಸ್ವಯಂ ಉದ್ಯೋಗ, ನೀರಿನ ಮಿತ ಬಳಕೆ, ಪ್ಲಾಸ್ಟಿಕ್ ನಿರ್ಮೂಲನೆ ಸೇರಿದಂತೆ ಪರಿಸರ, ಆರೋಗ್ಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಸ್ಥೆ ಆನೇಕ ಕಾರ್ಯಕ್ರಮ ಆಯೋಜಿಸಿದೆ. ಗ್ರಾಮೀಣ ಭಾಗಗಳಲ್ಲಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುತ್ತಿದೆ’ ಎಂದರು.
ನಿವೃತ್ತ ಶಿಕ್ಷಕ ಮಣಿ, ಬಲ್ಲಶೆಟ್ಟಿ, ರಾಮಶೆಟ್ಟಿ, ಕೆಂಪಗಾಮಶೆಟ್ಟಿ, ರಂಗಶೆಟ್ಟಿ, ಪ್ರತಿಧ್ವನಿ ಸಾಂಸ್ಕೃತಿಕ ಕಲಾ ವೇದಿಕೆ ಅಧ್ಯಕ್ಷ ಜೈಗುರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.