ಕೊಳ್ಳೇಗಾಲ: ರಕ್ತದಾನ ಮಾಡುವುದರಿಂದ ಆರೋಗ್ಯ ಮತ್ತಷ್ಟು ಉತ್ತಮವಾಗುತ್ತದೆ ಎಂದು ಶಾಸಕ ಎ.ಆರ್ ಕೃಷ್ಣಮೂರ್ತಿ ಹೇಳಿದರು.
ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದ ಅರುಣೋದಯ ಯೇಸು ಚರ್ಚ್‌ನಲ್ಲಿ ಭಾನುವಾರ ಭಾರತೀಯ ಕ್ರೈಸ್ತ ದಿನದ ಅಂಗವಾಗಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟನೆ ಮಾಡಿ ಮಾತನಾಡಿದರು.
ದಾನಗಳಲ್ಲಿ ಶ್ರೇಷ್ಠ ದಾನ ಎಂದರೆ ಅದು ರಕ್ತದಾನ. ರಕ್ತದಾನಕ್ಕೆ ಯಾರೂ ಬೆಲೆ ಕಟ್ಟಲು ಸಾಧ್ಯವಿಲ್ಲ. ರಕ್ತದಾನ ಮಾಡಿದರೆ ಆರೋಗ್ಯ ಲಾಭಗಳಿವೆ. ಹಾಗಾಗಿ ಯುವಕರು ಹಾಗೂ ಆರೋಗ್ಯವಂತರು ಹೆಚ್ಚಾಗಿ ರಕ್ತದಾನ ಮಾಡುವ ಮೂಲಕ ಇತರರ ಪ್ರಾಣವನ್ನು ಕಾಪಾಡಬೇಕು. ಕೆಲವು ಸಂದರ್ಭದಲ್ಲಿ ಎಷ್ಟೇ ಕೋಟಿ ಇದ್ದರೂ ಸಹ ನಮಗೆ ಬೇಕಾದ ರಕ್ತ ಸಿಗುವುದಿಲ್ಲ. ಆ ಕಾರಣ ರಕ್ತವು ಬಹಳ ಅಮೂಲ್ಯ. ಇತ್ತೀಚಿನ ದಿನಗಳಲ್ಲಿ ಕೆಲ ಯುವಕರು ಮದ್ಯ ಸೇವನೆ ಸೇರಿದಂತೆ ಅನೇಕ ದುಶ್ಚಟಗಳಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಚಟಗಳಿಗೆ ಬಲಿಯಾಗದೆ ಆರೋಗ್ಯವಂತರಾಗಿ ಬಾಳಬೇಕು. 17 ಬಾರಿ ರಕ್ತದಾನ ಮಾಡಿದ ಮಧುವನಹಳ್ಳಿಯ ಮೋಹನ್ ಅವರನ್ನು ಶ್ಲಾಘಿಸಿ ಅನೇಕರು ಇವರಂತೆ ಹೆಚ್ಚು ರಕ್ತದಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಕ್ತದಾನ ಮಾಡುವಂತೆ ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 85 ಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ಭಾರತೀಯ ಕ್ರೈಸ್ತ ದಿವಸವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಚರ್ಚ್ ಪಾಸ್ಟರ್ ವಿನ್ಸೆಂಟ್ ಅಮಲ್ ದಾಸ್, ಶ್ರೀಕಾಂತ್, ಫಿಲಿಪ್, ಲೋಕೇಶ್, ಪ್ರತಾಪ್, ಪ್ರವೀಣ್, ಲಿಂಗರಾಜು, ಮೋಹನ್, ಅಭಿಶೇಕ್, ಸಿದ್ದರಾಜು, ಚಾಮರಾಜನಗರ ರಕ್ತನಿಧಿ ಕೇಂದ್ರದ ನೌಕರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.