ಯಳಂದೂರು: ಚೈತ್ರವೆಂದರೆ ಚಿಗುರು, ರಣ ಬಿಸಿಲಿನಲ್ಲೂ ಅರಳಿಸಿಕೊಳ್ಳುವ ತರು–ಲತೆಗಳು, ವಸಂತನಆಗಮನದ ಮುನ್ಸೂಚನೆ ಸಾರುವ ಹೊಂಗೆ ಹೂಗಳ ಚಿತ್ತಾರ, ಜೇನಿಗೆ ಆಹ್ವಾನನೀಡುವ ಪುಷ್ಪಲೋಕ. ಇವೆಲ್ಲವನ್ನೂ ಪ್ರತಿ ವರ್ಷ ಬರ ಮಾಡಿಕೊಳ್ಳುವ ಪ್ರಕೃತಿಮಾತೆಯ ಸ್ಮರಣೆಗೆ ಮೆಚ್ಚದವರಾರು? ಮತ್ತೊಂದು ಯುಗಾದಿ ನಮ್ಮ ಮುಂದಿದೆ.
ತಾಲ್ಲೂಕಿನ ಬನದ ತುಂಬ ಒಣ ವೃಕ್ಷಗಳ ಬೋಳು ಶಿರದಲ್ಲಿ ಮೆಲ್ಲಗೆ ಇಣುಕುತ್ತಿರುವ ಎಳೆಎಲೆಗಳ ವರ್ಣ ತಂತುಗಳು, ಪ್ರತಿ ಟೊಂಗೆಯೂ ಹಸಿರು ತುಂಬಿಕೊಳ್ಳುವ ಸೋಜಿಗ ಹಾಗೂ ಕೆಸರುಹೊದ್ದ ಕೆರೆಕಟ್ಟೆಗಳಿಗೆ ಮಳೆರಾಯನನ್ನು ಕೆರೆಯುವ ಉಮೇದಿನೊಂದಿಗೆ ಹೊರ ಬರುವ ಎಲ್ಲಾಜೀವ ಜಂತುಗಳು. ಎಲ್ಲರಿಗೂ ಯುಗಾದಿ ಬರಲೇ ಬೇಕು. ನಾಡಿನಲ್ಲಿ ಜನಪದರಜಾತ್ರೆ–ಕೊಂಡೋತ್ಸವಗಳ ಸಂಭ್ರಮದ ಕಾವನ್ನು ನೀಗಿಸಿ ಹೊಸ ಧಿರಿಸು ತೊಟ್ಟು ನಲಿಸುವಗ್ರಾಮೀಣ ಹಬ್ಬಗಳಿಗೆ ಕೊನೆ ಹಾಡುವ ಆಚರಣೆಗೆ ಸಿದ್ಧತೆಗಳು ಪೂರ್ಣಗೊಂಡಿವೆ.
ಬೇವು–ಬೆಲ್ಲ: ‘ಹಬ್ಬದಂದು ಸಮೀಪದ ನದಿ, ಕೆರೆಗಳಲ್ಲಿ ಮಿಂದು, ಮಡಿ ಉಟ್ಟು, ಬೇವು ಬೆಲ್ಲದ ಮಿಶ್ರಣಸೇವಿಸುತ್ತಾರೆ. ಹಲವು ಗ್ರಾಮಗಳಲ್ಲಿ ಗದ್ದೆಗಳಲ್ಲಿ ಬೆಳೆದಿದ್ದ ಧವಸ ಧಾನ್ಯಗಳನ್ನುಹೊಸ ಮಡಕೆಯಲ್ಲಿ ಇಟ್ಟು ಆಹಾರ ಬೇಯಿಸಿ ದೇವರಿಗೆ ಅರ್ಪಿಸುತ್ತಾರೆ. ಹೊಸ ದಿನದಂದುಮನೆ ಮುಂಭಾಗ ಮಾವಿನ ತೋರಣ, ಬೇವಿನ ಸೊಪ್ಪು ಅಲಂಕರಿಸಿ ಇಷ್ಟ ದೈವಗಳನ್ನುನೆನೆಯುತ್ತಾರೆ. ಇದರಿಂದ ಮನೆ–ಮನಗಳಲ್ಲಿ ದೈವೀ ಕಳೆ ತುಂಬುತ್ತದೆ. ಹಬ್ಬದಹಿಂದೆ–ಮುಂದೆ ಕೊಂಡೋತ್ಸವ ಏರ್ಪಡಿಸಿ ನಾಡಮೇಗಲಮ್ಮ, ಮಂಟೇಸ್ವಾಮಿ, ಸಿದ್ದಪ್ಪಾಜಿಸ್ಮರಿಸುವ ವಾಡಿಕೆ ಇನ್ನೂ ಉಳಿದಿದೆ’ ಎನ್ನುತ್ತಾರೆ ಅರ್ಚಕ ಚಂದ್ರಮೌಳಿ.
ಜೀವನೋತ್ಸಾಹ: ‘ಅಲ್ಲಲ್ಲಿ ಸುಡು ಬಿಸಿಲಲ್ಲೂ ವಸಂತ ಚಿಗುತಿದ್ದಾನೆ. ವರುಣನ ಕಣ್ಣು ಮುಚ್ಚಾಟವೂನಡೆಯುತ್ತಿದೆ. ಕೃಷಿಕರು ಹೊನ್ನೇರು ಕಟ್ಟಿ, ಮರ ಗಣಗಲೆ ಇಟ್ಟು ನೇಗಿಲು ಪೂಜಿಸುವಪದ್ಧತಿ ಅಲ್ಲಲ್ಲಿ ಕಾಣ ಸಿಗುತ್ತದೆ. ಕೆಲವು ಕಡೆ ಭೂತಾಯಿಗೆ ನಮಿಸುತ್ತಾರೆ. ರೈತರಿಗೆಲವಲವಿಕೆ ತುಂಬುವಲ್ಲಿ ದಟ್ಟೈಸಿದ ಮೇಘಗಳ ಸಾಲು ಆಶಾ ಭಾವನೆ ಹೊಮ್ಮಿಸಿದರೆ, ಮುಗಿಲುನೆಲದ ನಂಟು ಬೆಸೆದು ಘಮಲು ಉಂಬುವ ಹನಿಗಳ ಸಾಲು ಮುಂಗಾರಿನ ನಿರೀಕ್ಷೆಹುಟ್ಟಿಸುತ್ತದೆ. ಹೊಸ ತಲೆಮಾರು ಆಧುನಿಕ ಎಲೆಕ್ಟ್ರಾನಿಕ್ ವಸ್ತು ಕೊಳ್ಳುವಉತ್ಸಾಹದಲ್ಲಿ ಹಬ್ಬಕ್ಕೆ ಕಳೆಗಟ್ಟಿಸುತ್ತಾರೆ’ ಎಂದು ಹೇಳುತ್ತಾರೆ ಸಾಹಿತಿ ಯಳಂದೂರುನಾಗೇಂದ್ರ.
ಆಚರಣೆ ಮಹತ್ವ
ಚೈತ್ರ ಶುದ್ಧ ಪಾಡ್ಯದಲ್ಲಿ ಬರುವ ಯುಗಾದಿ ಯುಗದ ಆರಂಭವನ್ನು ಸೂಚಿಸುತ್ತದೆ. ಪಂಚಾಂಗಪದ್ಧತಿಯಂತೆ ಚಾಂದ್ರಮಾನದಲ್ಲಿ ಚೈತ್ರಮಾಸದ ಮೊದಲ ದಿನವನ್ನು ಯುಗಾದಿ ಎನ್ನುತ್ತಾರೆ.ಸೌರಮಾನದಲ್ಲಿ ಮೇಷ ಇಲ್ಲವೇ ಚಿತ್ತ ಯುಗಾದಿಯ ಪ್ರಥಮ ದಿನ. ಇದು ಸಾಮಾನ್ಯವಾಗಿ ಏಪ್ರಿಲ್ 14ರಂದು ಬರುತ್ತದೆ. ಶಾಲಿವಾಹನ ದೊರೆಯು ಅಭಿಷಿಕ್ತನಾದ ದಿನ ಎಂತಲೂ ಕರೆಯುತ್ತಾರೆ.
ಪಂಚಾಂಗ ಗಣತಿಯಂತೆ ಈ ದಿನದಂದು ಆರಂಭವಾಗುವ ಹೊಸ ಸಂವತ್ಸರದ ಲೆಕ್ಕವನ್ನು ಶಾಲಿವಾಹನಶಕೆ ಎನ್ನುತ್ತಾರೆ. ಮನೆಯ ಅಧಿದೇವತೆಯ ಪೂಜೆ, ನವ ವಸ್ತ್ರಧಾರಣೆ, ಪಂಚಾಂಗ ಶ್ರವಣ,ದಾನ ಈ ದಿನದ ವಿಶೇಷತೆಗಳು. ಬದುಕಿನಲ್ಲಿ ಅನಿವಾರ್ಯವಾಗಿ ಬರುವ ಸುಖ–ದುಃಖಗಳನ್ನುಸಂಕೇತಿಸುವಂತೆ ಬೇವು–ಬೆಲ್ಲ ಸೇವನೆ ಯುಗಾದಿಯಲ್ಲಿ ಮನುಕುಲದ ಸಮ ಚಿತ್ತವನ್ನುಧ್ವನಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.