ಕೊಳ್ಳೇಗಾಲ: ಇಲ್ಲಿನ ಶಾಂತಿ ಚಿತ್ರಮಂದಿರದಲ್ಲಿ ‘ಎಕ್ಕ’ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದ್ದು ಅದರ ನಾಯಕ ನಟ ಯುವ ರಾಜ್ ಕುಮಾರ್ ಶನಿವಾರ ಭೇಟಿ ನೀಡಿದ್ದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಚಿತ್ರಮಂದಿರಕ್ಕೆ ತೆರಳಿದರು.
ಅಭಿಮಾನಿಗಳ ನೂಕು ನುಗ್ಗಲಿನ ಕಾರಣ ಕಾರಿನ ಮೇಲೆ ಏರಿ ಕುಳಿತು ಅಭಿಮಾನಿಗಳಿಗೆ ಕೈ ಬೀಸಿದರು. ಭಿಮಾನಿಗಳು ಅಪ್ಪು ಹಾಗೂ ಯುವ ಹೆಸರನ್ನು ಕೂಗಿ ಜೈಕಾರ ಹಾಕಿದರು. ಯುವರಾಜ್ ಕುಮಾರ್ ಮಾತನಾಡಿ, ಎಕ್ಕ ಚಿತ್ರವು ತುಂಬಾ ಚೆನ್ನಾಗಿದೆ ಹಾಗಾಗಿ ಅಭಿಮಾನಿಗಳು ನಮ್ಮ ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕು ಎಂದರು. ಬಳಿಕ ಚಾಮರಾಜ ನಗರಕ್ಕೆ ತೆರಳಿದರು. ನೂಕು ನುಗ್ಗಲು ಉಂಟಾದ್ದರಿಂದ ಪೊಲೀಸರು ಲಾಠಿ ಬೀಸಿದರು. ಶಿವರಾಜ್ ಕುಮಾರ್ ಸಂಘದ ಅಧ್ಯಕ್ಷ ಪ್ರಭು, ಭೀಮನಗರದ ರಾಜೇಶ್, ಮಲ್ಲ, ಅರ್ಜುನ್ , ಅಮೋಘ ಇದ್ದರು.
ಗುಂಡ್ಲುಪೇಟೆಗೆ ಭೇಟಿ: ಪಟ್ಟಣದ ಸೂರ್ಯ ಚಿತ್ರ ಮಂದಿರಕ್ಕೆ ನಟ ಯುವ ರಾಜ್ ಕುಮಾರ್ ಶನಿವಾರ ಭೇಟಿ ನೀಡಿದರು.
ನೂರಾರು ಮಂದಿ ಅಭಿಮಾನಿಗಳು ಚಿತ್ರ ಮಂದಿರದ ಮುಂದೆ ಜಮಾಯಿಸಿ ಹೂವಿನ ಮಳೆ ಸುರಿಸಿ ಸ್ವಾಗತ ಕೋರಿದರು. ಜನಸ್ತೋಮ ಕಂಡ ಯುವ ರಾಜ್ ಕುಮಾರ್ ಎಲ್ಲರಿಗೂ ಕೈ ಬೀಸಿ ಧನ್ಯವಾದ ತಿಳಿಸಿದರು. ಚಿತ್ರ ಮಂದಿರದಲ್ಲಿ ಅಭಿಮಾನಿಗಳ ಪೋಟೊ ತೆಗೆಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.