ಬಾಗೇಪಲ್ಲಿ: ತಾಲ್ಲೂಕಿನ ಕಾನಗಮಾಕಲ ಪಲ್ಲಿ ಗ್ರಾಮ ಪಂಚಾಯಿತಿ ಮೇರುವಪಲ್ಲಿ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮ ಸ್ಥರು ಮಂಗಳವಾರ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಮಾತನಾಡಿ, ಕಳೆದ 2-3 ತಿಂಗಳಿನಿಂದ ಗ್ರಾಮದಲ್ಲಿನ ಬೆಳೆಗಳಿಗೆ ಕೊಳವೆ ಬಾವಿಯಿಂದ ನೀರು ಪೂರೈಸಲಾಗುತ್ತಿದೆ. ಗ್ರಾಮದ ಸಿಸ್ಟನ್ ಹಾಗೂ ನಲ್ಲಿಗಳು ಬತ್ತಿವೆ. ಈಗ ಕೊಳವೆ ಬಾವಿಗೆ ಪೈಪ್‌ಲೈನ್ ಅಳವಡಿಸದೇ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ.
ಇದರಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದೆ. ಗ್ರಾಮಕ್ಕೆ ಕಲ್ಪಿಸಲಾಗುವ ಸೌಕರ್ಯ ಗಳಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳು ಪ್ರಭಾವ ತಡೆಯಬೇಕು. ಇಲಾಖೆ ಅಧಿಕಾರಿಗಳು 2-3 ದಿನಗಳಲ್ಲಿ ಪೈಪ್‌ಲೈನ್ ಅಳವ ಡಿಸದಿದ್ದರೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚ ರಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಸೂರಪ್ಪ, ಅಶ್ವತ್ಥಪ್ಪ, ಈರಪ್ಪ, ಪ್ರಭಾಕರ, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.