ADVERTISEMENT

ಗುಣಮಟ್ಟದ ಔಷಧಿ ನೀಡಿ, ಪ್ರಾಣ ಉಳಿಸಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 7:05 IST
Last Updated 12 ಏಪ್ರಿಲ್ 2012, 7:05 IST

ಶಿಡ್ಲಘಟ್ಟ: ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ನೀಡುವಾಗ ಉತ್ತಮ ಗುಣಮಟ್ಟದ ಔಷಧಿ ನೀಡಬೇಕು. ಆಗ ಮಾತ್ರ ರೋಗಿ ಗುಣಮುಖವಾಗಲು ಸಾಧ್ಯ ಎಂದು ತಾಲ್ಲೂಕು ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ವಿ.ವಿ.ಎಸ್ ಗುಪ್ತ ಶಂಕರ ಹೇಳಿದರು.

 ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಶಂಕರ ಕಣ್ಣಿನ ಆಸ್ಪತ್ರೆಯ ವತಿಯಿಂದ ನಡೆದ ನೇತ್ರ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.

ಉಚಿತವಾಗಿ ಔಷಧಿಯನ್ನು ಪಡೆದ ಬಡ ರೋಗಿಗಳು ನಂತರ ಅದೇ ರೀತಿ  ಔಷಧಿ ಕೊಳ್ಳಲು ಅಂಗಡಿಗೆ ಹೋಗುತ್ತಾರೆ. ಆದರೆ ಆ ಔಷಧಿ ಸಿಗದೆ ಪರದಾಡು ವಂತಾಗುತ್ತದೆ. ರೋಗಿಗಳು ಎಷ್ಟು ಕಾಲಾವಧಿಗೆ ಔಷಧಿಯನ್ನು ಬಳಸಬೇಕೋ ಅದಕ್ಕಾಗುವಷ್ಟು ಔಷಧಿಯನ್ನು ಉಚಿತವಾಗಿ ನೀಡಿದರೆ ಉತ್ತಮ ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ಶಂಕರ ಕಣ್ಣಿನ ಆಸ್ಪತ್ರೆ ನಿಯೋಜಕ ಜಯರಾಂ ಗೌಡ, ಕೃಷ್ಣಪ್ಪ, ತಾಲ್ಲೂಕು ಔಷಧಿ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ದೇಶನಾರಾಯಣ ಬಾಬು, ಕಾರ್ಯದರ್ಶಿ ಟಿ.ಕೆ.ಮಧು, ಪದಾಧಿಕಾರಿಗಳಾದ ಬಾಬು, ಮೋಹನ್, ಕುಮಾರ್, ಶಂಕರನಾರಾಯಣ್, ಸುರೇಶ್ ಮತ್ತಿತರರು ಹಾಜರಿದ್ದರು.

ಕಂಪ್ಯೂಟರ್ ತರಬೇತಿಗೆ ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ:  ದ್ವಿತೀಯ ಪಿಯುಸಿ ಉತ್ತೀರ್ಣರಾದ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 6 ತಿಂಗಳ ಕಂಪ್ಯೂಟರ್ ತರಬೇತಿ ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
 ಆಸಕ್ತರು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಅರ್ಜಿಯನ್ನು ಪಡೆದು ಸಲ್ಲಿಸಬಹುದು. ಮಾಹಿತಿಗೆ 08156-274535 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.