ADVERTISEMENT

ಗೌರಿಬಿದನೂರಿನಲ್ಲಿ ಗ್ರಾಹಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 9:32 IST
Last Updated 3 ಮಾರ್ಚ್ 2014, 9:32 IST
ಗೌರಿಬಿದನೂರಿನಲ್ಲಿ ವಿಶ್ವ ಗ್ರಾಹಕರ ದಿನಾಚರಣೆ ಅಂಗವಾಗಿ ಭಾನುವಾರ ಸಂತೆಯಲ್ಲಿ ಗ್ರಾಹಕರ ಹಕ್ಕುಗಳು ಮತ್ತು ಜವಾಬ್ದಾರಿ ಬಗ್ಗೆ ರಾಘವೇಂದ್ರ ಟ್ರಸ್ಟ್ ಫಾರ್ ಎಜು­ಕೇಷನ್ ಸಂಸ್ಥೆ ಸದಸ್ಯರು ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಿದರು. ಸಂಸ್ಥೆ ಕಾರ್ಯದರ್ಶಿ ಬಿ.ವಿ.ಅಶ್ವತ್ಥನಾರಾಯಣಶೆಟ್ಟಿ, ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕೆ.ನರಸಿಂಹರೆಡ್ಡಿ, ಬಾಲಕೃಷ್ಣ, ಪ್ರದೀಪ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ಗೌರಿಬಿದನೂರು: ಪಟ್ಟಣದಲ್ಲಿ ಭಾನು­ವಾರ ಗ್ರಾಹಕರ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ರಾಘವೇಂದ್ರ ಟ್ರಸ್ಟ್ ಫಾರ್ ಎಜು­ಕೇಷನ್ ಸಂಸ್ಥೆ ಸದಸ್ಯರು ಸಂತೆಯಲ್ಲಿ ಗ್ರಾಹಕರ ಹಕ್ಕುಗಳ ಮತ್ತು ಜವಾ­ಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸಿದರು.

ರಾಘವೇಂದ್ರ ಟ್ರಸ್ಟ್‌ನ ಕಾರ್ಯ­ದರ್ಶಿ ಬಿ.ವಿ ಅಶ್ವತ್ಥ­ನಾರಾಯಣಶೆಟ್ಟಿ ಮಾತ­ನಾಡಿ, ಖರೀದಿಸುವ ಮುನ್ನ ಗ್ರಾಹಕರು ವಸ್ತುವಿನ ದಿನಾಂಕ, ಗುಣಮಟ್ಟ ಪರಿಶೀಲಿಸಬೇಕು. ಇದಲ್ಲದೇ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಗ್ರಾಹಕರ ವೇದಿಕೆಗಳಲ್ಲಿ ದೂರು ಸಲ್ಲಿಸಿ ಪರಿಹಾರ ಪಡೆಯಬಹುದು ಎಂದು ತಿಳಿಸಿದರು.

ತೂಕ ಮತ್ತು ಅಳತೆಗಳಲ್ಲಿ ವ್ಯತ್ಯಾಸ ಕಂಡುಬಂದರೆ ಸಂಬಂಧಿಸಿದ ಅಧಿಕಾರಿ­ಗಳಿಗೆ ಮಾಹಿತಿ ನೀಡಿ, ನಕಲಿ ವಸ್ತುಗಳ ಬಗ್ಗೆ ಎಚ್ಚರ ವಹಿಸಿ, ಪ್ರತಿ ವರ್ಷ ಇಲಾಖೆ ವತಿಯಿಂದ ಪರಿಶೀಲಿಸ­ಲಾಗಿ­ದೆಯೇ ಎಂಬುದನ್ನು ಗಮನಿಸ­ಬೇಕು. ಸರಕುಗಳ ಯೋಗ್ಯತೆ, ಪ್ರಮಾಣ, ಶುದ್ಧತೆ, ಧಾರಣೆ ಬಗ್ಗೆ ಮಾಹಿತಿ ಪಡೆಯುವುದು ಅಗತ್ಯ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಬಾಲ­ಕೃಷ್ಣ, ಕೆ.ನರ­ಸಿಂಹರೆಡ್ಡಿ, ಬಾಲಕೃಷ್ಣ, ಪ್ರದೀಪ್‌ಕುಮಾರ್, ಲಕ್ಷ್ಮೀನರಸಪ್ಪ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.