ADVERTISEMENT

ಸವಲತ್ತು ತಲುಪಿಸಿ: ಬ್ಯಾಂಕ್ ಅಧಿಕಾರಿಗಳಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 8:00 IST
Last Updated 2 ಮಾರ್ಚ್ 2012, 8:00 IST

ಚಿಂತಾಮಣಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ರೂಪಿಸಿರುವ ಯೋಜನೆಗಳಲ್ಲಿ ಸಿಗುವ ಸವ ಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸಲು ಬ್ಯಾಂಕ್ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದು ಲೀಡ್ ಬ್ಯಾಂಕ್ ಅಧಿಕಾರಿ ಸುಂದರೇಶನ್ ಸಲಹೆ ನೀಡಿದ್ದಾರೆ.

ನಗರದ ತಾಲ್ಲೂಕು ಪಂಚಾಯಿತಿ ಸಭಾಂ ಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಬ್ಯಾಂಕ್ ಅಧಿಕಾರಿಗಳ ತ್ರೈಮಾಸಿಕ ಪ್ರಗತಿ ಪರಿ ಶೀಲನಾ ಸಭೆಯಲ್ಲಿ ಮಾತನಾಡಿದರು.

ಫಲಾನುಭವಿಗಳನ್ನು ಅಲೆ ದಾಡಿಸದೆ ತಿಳಿವಳಿಕೆ ನೀಡಿ ಸಾಲ ನೀಡುವುದರಿಂದ ಬ್ಯಾಂಕ್ ಮತ್ತು ಇಲಾಖೆಗಳ ಮೇಲೆ ವಿಶ್ವಾಸ ಇಮ್ಮಡಿಸಿ ಒಳ್ಳೆಯ ವ್ಯವಹಾರ ನಡೆಯುತ್ತದೆ ಎಂದರು.

ಸರ್ಕಾರದ ಯೋಜನೆಗಳ ಅನುಸಾರವಾಗಿ ನೀಡಬೇಕಾದ ಸೌಲಭ್ಯಗಳ ಕಡತಗಳನ್ನು ಇಲಾ ಖಾವಾರು  ಹಾಗೂ ಬ್ಯಾಂಕ್‌ಗಳು ನೀಡಬೇಕಾಗಿದ್ದ ಸಾಲ ಮತ್ತು ಸಹಾಯಧನದ ಬಗ್ಗೆ ಪರಿಶೀಲಿಸಿ, ಕೆಲವು ಸೂಚನೆಗಳನ್ನು ನೀಡಿದರು. 

ಬಹುತೇಕ ಇಲಾಖೆಗಳ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿರುವುದನ್ನು ಕಂಡು ಅಸಮದಾನ ಸೂಚಿಸಿದರು. ಇಂತಹ ಪ್ರಮುಖವಾದ ಸಭೆಗೆ ಗೈರು ಹಾಜರಾಗುವ ಇಲಾಖಾಧಿಕಾರಿಗಳು ಸಾರ್ವಜನಿಕರಿಗೆ ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂಬುದರ ಬಗ್ಗೆ ಕಿಡಿ ಕಾರಿದರು. 

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಬಾಲಕೃಷ್ಣ, ಕಾರ್ಯ ನಿರ್ವಹಣಾ ಧಿಕಾರಿ ಬಸವರಾಜ್ ಮತ್ತು ಎಸ್‌ಜೆಎಸ್‌ವೈ ಅಧಿಕಾರಿ ನಾಗರಾಜರಾವ್ ಮತ್ತು ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.