ADVERTISEMENT

ಹಿರೇಕಟ್ಟಿಗೇನಹಳ್ಳಿಗೆ ಪಿಯು ಕಾಲೇಜು ಪ್ರಸಾವ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 9:26 IST
Last Updated 3 ಮಾರ್ಚ್ 2014, 9:26 IST

ಚಿಂತಾಮಣಿ: ತಾಲ್ಲೂಕಿನ ಹಿರೇಕಟ್ಟಿಗೇ­ನ­ಹಳ್ಳಿಯಲ್ಲಿ ಸುವರ್ಣ ಗ್ರಾಮೋದಯ ಯೋಜನೆಯಡಿ ₨ 16.70 ಲಕ್ಷ ವೆಚ್ಚದ ಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ಶನಿವಾರ ಶಾಸಕ ಎಂ.ಕೃಷ್ಣಾರೆಡ್ಡಿ ಚಾಲನೆ ನೀಡಿದರು.

‘ಅನೇಕ ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿರುವ ಹಿರೇಕಟ್ಟಿಗೇನ­ಹಳ್ಳಿ­ಯಲ್ಲಿ ಪಿಯು ಕಾಲೇಜು ಮತ್ತು ಪಶುವೈದ್ಯಕೀಯ ಆಸ್ಪತ್ರೆ ತೆರೆಯಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಶೀಘ್ರ ಮಂಜೂರಾಗುವ ಭರವಸೆ ಇದೆ’ ಎಂದು ಕೃಷ್ಣಾರೆಡ್ಡಿ ಹೇಳಿದರು.

ಹಾಲು ಒಕ್ಕೂಟದ ನಿರ್ದೇಶಕ ಟಿ.ಎನ್.ರಾಜಗೋಪಾಲ್‌, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣೇ­ಗೌಡ ಮಾತನಾಡಿದರು. ಎಪಿ­ಎಂಸಿ ಸದಸ್ಯ ಸುಬ್ಬಾರೆಡ್ಡಿ, ಟಿಎಪಿಸಿಎಂಎಸ್‌ ಮಾಜಿ ಅಧ್ಯಕ್ಷ ರವೀಂದ್ರಗೌಡ, ತಾಲ್ಲೂಕು ಜೆಡಿಎಸ್‌ ಕಾರ್ಯದರ್ಶಿ ರಾಚಾಪುರ ಶ್ರೀನಿವಾಸ್‌, ನಗರಸಭೆ ಸದಸ್ಯರಾದ ಆರ್‌.ಪ್ರಕಾಶ್‌, ಮಂಜು­ನಾಥ್‌, ಮುಖಂಡರಾದ ದೊಡ್ಡ­ಬೊಮ್ಮನಹಳ್ಳಿ ವೆಂಕಟರೆಡ್ಡಿ, ಮುನಿ­ರಾಜು, ಹನುಮಂತಪ್ಪ, ರಾಮಣ್ಣ, ಮಂಜು, ದೊಡ್ಡಮುನಿವೆಂಕಟಪ್ಪ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.