ADVERTISEMENT

ದೇವಿಕುಂಟೆ ರೈತರಿಗೆ ನೆರವು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 4:29 IST
Last Updated 11 ಏಪ್ರಿಲ್ 2021, 4:29 IST

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲ್ಲೂಕಿನ ದೇವಿಕುಂಟೆಯ ರೈತ ಗೋಪಾಲ್ ಅವರ ರಾಸುಗಳಿಗೆ ಚಿಕ್ಕಬಳ್ಳಾಪುರದ ಸಿಎಸ್ ಹಣ್ಣಿನ ಅಂಗಡಿಯ ಸಿ.ಮಲ್ಲಿಕಾರ್ಜುನ್ ಮತ್ತು ಭಾಸ್ಕರ್ ಹಣ್ಣುಗಳನ್ನು ಶನಿವಾರ ಕಳುಹಿಸಿಕೊಟ್ಟರು.

35ಕ್ಕೂ ಹೆಚ್ಚು ದೇಸಿ ಹಸುಗಳನ್ನು ಸಾಕುತ್ತಿರುವ ಗೋಪಾಲ್ ಅವರಿಗೆ ಮೇವಿನ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಇತ್ತೀಚೆಗೆ ‘ಪ್ರಜಾವಾಣಿ’ಯಲ್ಲಿ ವರದಿ ಸಹ ಪ್ರಕಟವಾಗಿತ್ತು. ಈ ಕಾರಣದಿಂದ ಜಿಲ್ಲೆಯ ವಿವಿಧ ಭಾಗಗಳ ರೈತರು, ವ್ಯಾಪಾರಿಗಳು ಹಣ್ಣ, ತರಕಾರಿಗಳನ್ನು ಕಳುಹಿಸುತ್ತಿದ್ದಾರೆ.

30 ಕ್ರೇಟ್ ಖರ್ಬೂಜ, ಬಾಳೆಹಣ್ಣು, ಟೊಮೆಟೊವನ್ನು ರಾಸುಗಳಿಗೆ ಮಲ್ಲಿಕಾರ್ಜುನ್ ಮತ್ತು ಭಾಸ್ಕರ್ ಕಳುಹಿಸಿದ್ದಾರೆ. ಮೇವು ನೀಡುವ ಭರವಸೆಯನ್ನೂ ನೀಡಿದ್ದಾರೆ. ಇದು ರೈತರಿಗೆ ಸಂತಸ ಮೂಡಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.