ADVERTISEMENT

ಬಾಗೇಪಲ್ಲಿ: ಮಕ್ಕಳಿಂದ ಸಾಹಸ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 14:20 IST
Last Updated 16 ಆಗಸ್ಟ್ 2024, 14:20 IST
ಬಾಗೇಪಲ್ಲಿ ಹೊರವಲಯದ ಪ್ರಗತಿ ವಿದ್ಯಾ ಸಂಸ್ಥೆಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಂದ ಪಿರಿಮಿಡ್ ಸಾಹಸ ಪ್ರದರ್ಶನ
ಬಾಗೇಪಲ್ಲಿ ಹೊರವಲಯದ ಪ್ರಗತಿ ವಿದ್ಯಾ ಸಂಸ್ಥೆಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಂದ ಪಿರಿಮಿಡ್ ಸಾಹಸ ಪ್ರದರ್ಶನ   

ಬಾಗೇಪಲ್ಲಿ: ಪಟ್ಟಣದ ಹೊರವಲಯದ ಪ್ರಗತಿ ವಿದ್ಯಾ ಸಂಸ್ಥೆಯ ಶಾಲಾವರಣದಲ್ಲಿ ಗುರುವಾರ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.

ಶಾಲಾ ಮಕ್ಕಳಿಂದ ಕವಾಯತು, ಮಲ್ಲಕಂಬ, ಪಿರಿಮಿಡ್ ಪ್ರದರ್ಶನ, ವಿವಿಧ ವೇಷಭೂಷಣಗಳು, ಜನಮನ ಸೆಳೆಯಿತು. ವಿದ್ಯಾರ್ಥಿಗಳ ದೇಶಭಕ್ತಿಗೀತೆಗಳ ನೃತ್ಯಗಳಿಗೆ ಶಿಕ್ಷಕ, ಶಿಕ್ಷಕಿಯರು ಸಹ ಹೆಜ್ಜೆ ಹಾಕಿದರು.

ಪ್ರಗತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಲಲಿತಾಮಿರ್ಜಾ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಆದರ್ಶ, ನಡೆ, ನುಡಿ, ಹೋರಾಟದ ಹಾದಿಯನ್ನು ಯುವಕರು ಅರಿಯಬೇಕು ಎಂದರು.

ADVERTISEMENT

ಪಠ್ಯಪುಸ್ತಕಗಳ ಜೊತೆಗೆ ಕಥೆ, ಕಾದಂಬರಿ, ಸಾಹಿತ್ಯ, ಸಂಸ್ಕಂತಿ, ಸೈದ್ದಾಂತಿ ಹೋರಾಟ, ವೈಜ್ಞಾನಿಕವಾಗಿ ಅಧ್ಯಯನದ ಪುಸ್ತಕಗಳನ್ನು ಓದಬೇಕು. ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಆಡಳಿತ ಮಂಡಲಿ ಕಾರ್ಯದರ್ಶಿ ಮಿರ್ಜಾ ಬಾಕಲ್ ಆಲಿ, ಮುಖ್ಯಸ್ಥ ಆರನ್ ಮಿರ್ಜಾ, ಮುಖ್ಯಶಿಕ್ಷಕಿ ಸೌರುನ್ನೀಸಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.