ADVERTISEMENT

‘2ಎ’ ಮೀಸಲಾತಿ ಪಡೆಯಲು ಶಾಸಕರ ಪ್ರಯತ್ನ: ಬಲಿಜ ಸಮುದಾಯದ ಮುಖಂಡರು

ಪಿ.ಸಿ.ಮೋಹನ್–ಪ್ರದೀಪ್ ಈಶ್ವರ್ ನಡುವೆ ವೈಮನಸ್ಸು ಮೂಡಿಸಲು ಯತ್ನ; ಬಲಿಜ ಮುಖಂಡರ ಆರೋಪ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 15:41 IST
Last Updated 18 ಮಾರ್ಚ್ 2025, 15:41 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್‌.ಪಿ.ಶ್ರೀನಿವಾಸ್ ಮಾತನಾಡಿದರು
ಚಿಕ್ಕಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್‌.ಪಿ.ಶ್ರೀನಿವಾಸ್ ಮಾತನಾಡಿದರು   

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ಮತ್ತು ಸಂಸದ ಪಿ.ಸಿ.ಮೋಹನ್ ಬಲಿಜ ಸಮುದಾಯದ ಎರಡು ಕಣ್ಣುಗಳು. ಇವರಿಬ್ಬರ ನಡುವೆ ಉದ್ದೇಶ ಪೂರ್ವಕವಾಗಿ ವೈಮನಸ್ಸು ತಂದಿಟ್ಟು ಸಮುದಾಯವನ್ನು ನಗೆಪಾಟಿಲಿಗೆ ಗುರಿ ಮಾಡಲಾಗಿದೆ ಎಂದು ಬಲಿಜ ಸಮುದಾಯದ ಮುಖಂಡರು ತಿಳಿಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಮುದಾಯದ ಮುಖಂಡ ಎಸ್‌.ಪಿ.ಶ್ರೀನಿವಾಸ್ ಮಾತನಾಡಿ, ಬಲಿಜ ಸಮುದಾಯ ಒಗ್ಗಟ್ಟಿನಿಂದ ಇದೆ. ಇದನ್ನು ಸಹಿಸದೆ ಕೆಲವರು ಸಂಸದ ಪಿ.ಸಿ.ಮೋಹನ್ ಮತ್ತು ಶಾಸಕ ಪ್ರದೀಪ್ ಈಶ್ವರ್ ನಡುವೆ ನಡುವೆ ತಂದಿಟ್ಟಿದ್ದಾರೆ. ಸುರೇಶ್ ಎಂಬ ವ್ಯಕ್ತಿ ಈ ಹಿಂದೆ ಪಿ.ಸಿ.ಮೋಹನ್ ಅವರ ಬೆಂಬಲಿಗನಾಗಿದ್ದ. ಆದರೆ ಈಗ ಇಲ್ಲ. ಈ ವ್ಯಕ್ತಿ ಅನಗತ್ಯವಾಗಿ ಮಾತನಾಡಿದ ಫಲವಾಗಿ ಬೆಂಗಳೂರಿನಲ್ಲಿ ನಡೆದ ಕೈವಾರ ತಾತಯ್ಯ ಅವರ ಜಯಂತಿಯಲ್ಲಿ ಗೊಂದಲಗಳು ಸೃಷ್ಟಿಯಾಗಿವೆ ಎಂದರು.

ಪಿ.ಸಿ.ಮೋಹನ್ ಮತ್ತು ಪ್ರದೀಪ್‌ ಈಶ್ವರ್ ಸಂಬಂಧ ಚೆನ್ನಾಗಿದೆ. ಸಮುದಾಯಕ್ಕೆ ಅಗತ್ಯವಿರುವ ‘2ಎ’ ಮೀಸಲಾತಿಯನ್ನು ಪ್ರದೀಪ್ ಈಶ್ವರ್ ಅವರು ತಂದೇ ತರುತ್ತಾರೆ. ತಾತಯ್ಯ ಅವರ ಜಯಂತಿಯಲ್ಲಿ ನಡೆದ ಘಟನೆ ಅಲ್ಲಿಗೆ ಬಿಡಬೇಕು. ಇನ್ನು ಮುಂದೆ ಸಮುದಾಯದ ಅಭಿವೃದ್ಧಿಯ ಕಡೆ ಗಮನ ಹರಿಸಬೇಕಿದೆ ಎಂದರು.

ADVERTISEMENT

ಪಕ್ಷ, ಸಿದ್ಧಾಂತ ಬೇರೆ ಇರಬಹುದು. ಆದರೆ ಜನಾಂಗದ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶನ ಅಗತ್ಯ. ಬಲಿಜ ಸಮುದಾಯಕ್ಕೆ ಮೋಹನ್ ಅವರ ಕೊಡುಗೆ ಅಪಾರವಾಗಿದೆ. ಕಾರ್ಯಕ್ರಮದಲ್ಲಿ ಶಾಸಕರು ಮಾತನಾಡಲಿಲ್ಲ ಎಂದಿದ್ದರೆ ರಾಜಕೀಯವಾಗಿ ಅವರಿಗೆ ಹಿನ್ನಡೆ ಆಗುತ್ತಿತ್ತು. ಅದು ಅವರ ಜವಾಬ್ದಾರಿ ಸಹ ಎಂದು ಹೇಳಿದರು.

ನಮ್ಮ ಸಮುದಾಯಕ್ಕೆ ‘2ಎ’ ಮೀಸಲಾತಿ ಪೂರ್ಣ ಪ್ರಮಾಣದಲ್ಲಿ ದೊರೆಯಬೇಕು ಎಂದು ಶಾಸಕರು ಪ್ರಯತ್ನಿಸುತ್ತಿದ್ದಾರೆ. ಮುಖ್ಯಮಂತ್ರಿ ಅವರ ಮನವೊಲಿಸುತ್ತಿದ್ದಾರೆ ಎಂದರು.

ಪಿಎಲ್‌ಡಿ ಬ್ಯಾಂಕ್ ನಾಮನಿರ್ದೇಶಿತ ಸದಸ್ಯ ವೆಂಕಟನಾರಾಯಣಪ್ಪ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಾ.14ರಂದು ನಡೆದ ಕೈವಾರ ತಾತಯ್ಯ ಅವರ ಜಯಂತಿಯಲ್ಲಿ ಅವಾಂತರ ಆಗಬಾರದಿತ್ತು ಎಂದರು.

ಡ್ಯಾನ್ಸ್ ಶ್ರೀನಿವಾಸ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್, ಜೋಳದ ಕಿಟ್ಟಿ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಸುರೇಶ್, ಡ್ಯಾನ್ಸ್ ಶ್ರೀನಿವಾಸ್, ವೆಂಕಟನಾರಾಯಣಪ್ಪ,
[13:03, 18/03/2025] ಡಿ.ಎಂ.ಕುರ್ಕೆ ಪ್ರಶಾಂತ್: ನಮ್ಕ ಜನಾಂಗದ ರಾಜಕೀಯ ನಾಯಕರಲ್ಲಿ ಭಿನ್ನಾಭಿಪ್ರಾಯ ಇಲ್ಲ. ಅವರು ಬಿಜೆಪಿ ಎಂದು ಬಿಟ್ಟು ಕೊಡವ ವ್ಯವಸ್ಥೆ ಇಲ್ಲ. ತೀರಾ ಬಡವರಿಗೆ ಸಮುದಾಯವರಿಗೆ ವಿದ್ಯಾಭ್ಯಾಸ ಕೊಡುತ್ತಿದ್ದಾರೆ. ಬೆಳವಣಿಗೆ ಸಹಿಸದೆ ಅಸೂಯೆ ಇದೆ. ಪ್ರದೀಪ್ ಅವರು ಆಡಿದ ಮಾಡತು ಜನಾಂಗಕ್ಕೆ ಏನಾದರೂ ಮಾಡಬೇಕು ಎನ್ನುವ ಆಸೆ.


ಜನಾಂಗ. ಪ್ರದೀಪ್ ಈಶ್ವರ್ ಜನಾಂಗ ಒಗ್ಗಟ್ಟಾಗಿ ಇದೆ. ಜಯರಾಮ್ ಪಿ.ಸಿ ಮೋಹನ್ ಸೀತಾರಾಮ ಪ್ರದೀಪ್ ಎಲ್ಲರನ್ನೂ ಒಂದೇ ವೇದಿಕೆಗೆ ಕರೆ ತರುವ ಕೆಲಸ.

ಸುರೇಶ್ ಎಂಬಾತ ಬೆಂಕಿ ಹಾಕಲು ಅಲ್ಲಿಗೆ ಬಂದಿದ್ದಾನೆ.
[13:10, 18/03/2025] ಡಿ.ಎಂ.ಕುರ್ಕೆ ಪ್ರಶಾಂತ್: ಡ್ಯಾನ್ ಶ್ರೀನಿವಾಸ್; ಜನರು ತಾತಯ್ಯ ಅವರ ಜಯಂತಿಗೆ ಪಕ್ಷಾತೀತ ಜಾತ್ಯತೀತವಾಗಿ ಕಾರ್ಯಕ್ರಮಕ್ಕೆ ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.