ಗೌರಿಬಿದನೂರು: ರಾಜ್ಯ ಸರ್ಕಾರವು ಆರಂಭಿಸಲಿರುವ ಹಿಂದುಳಿದ ವರ್ಗಗಳ ಜಾತಿ ಗಣತಿಯಲ್ಲಿ ಸಾದರ ಸಮುದಾಯದವರು ಕಡ್ಡಾಯವಾಗಿ 461 ಕ್ರಮ ಸಂಖ್ಯೆಯೊಂದಿಗೆ ‘ಹಿಂದೂ ಸಾದರು’ ಎಂದೇ ಬರೆಸಬೇಕು ಎಂದು ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಡಿ.ಇ. ರವಿಕುಮಾರ್ ಮನವಿ ಮಾಡಿದರು.
ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
‘ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ತುಮಕೂರು, ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಗಳು ಸೇರಿದಂತೆ ಕೆಲವು ಸೀಮಿತ ವ್ಯಾಪ್ತಿಯಲ್ಲಿ ಹಿಂದೂ ಸಾದರ ಸಮುದಾಯದವರು ವಾಸವಿದ್ದಾರೆ. ಕುಲಕಸುಬಿನ ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಜಾತಿ ಸಮೀಕ್ಷೆಗಾಗಿ ಅಧಿಕಾರಿಗಳು ಅಥವಾ ಸಿಬ್ಬಂದಿ ತಮ್ಮ ಮನೆಗೆ ಬಂದಾಗ, ತಾವೆಲ್ಲರೂ 461 ಕ್ರಮಸಂಖ್ಯೆಯೊಂದಿಗೆ ಹಿಂದೂ ಸಾದರು ಎಂಬ ಜಾತಿಯನ್ನೇ ಬರೆಸಬೇಕು. ಆ ಮೂಲಕ ಭವಿಷ್ಯದಲ್ಲಿ ತಮ್ಮ ಮಕ್ಕಳಿಗೆ ಸಿಗಬಹುದಾದ ಸೌಲಭ್ಯ ಪಡೆಯಲು ಸಹಕಾರಿಯಾಗಲಿದೆ’ ಎಂದರು.
ತಾಲ್ಲೂಕು ಸಮಿತಿ ಅಧ್ಯಕ್ಷ ಆರ್.ವೇಣುಗೋಪಾಲ್ ಮಾತನಾಡಿ, ಸಮುದಾಯದ ಹಿರಿಯರಿಗೆ ಜಾತಿ ಸಮೀಕ್ಷೆ ಬಗ್ಗೆ ಮಾಹಿತಿ ನೀಡಲಾಗಿದೆ. ಮನೆಯಲ್ಲಿನ ಪ್ರತಿಯೊಬ್ಬರಿಗೂ ತಾವು ಹಿಂದೂ ಸಾದರ ಸಮುದಾಯಕ್ಕೆ ಸೇರಿದ್ದು, ಹಿಂದುಳಿದ ವರ್ಗದ 2ಎ ಅಡಿ ಶೈಕ್ಷಣಿಕ ಮತ್ತು ಸಾಮಾಜಿಕ ಸೌಲಭ್ಯ ಪಡೆಯಲು ಅರ್ಹತೆ ಹೊಂದಿದ್ದೇವೆ ಎಂದರು.
ಗೋಷ್ಠಿಯಲ್ಲಿ ಕೇಂದ್ರ ಸಮಿತಿ ಕಾರ್ಯದರ್ಶಿ ಆರ್.ಶಿವಶಂಕರ್, ಶಶಿಧರ್, ಜಿ.ಆರ್.ರಾಜಶೇಖರ್, ಡಾ.ಸಿ.ಗಂಗಲಕ್ಷ್ಮಮ್ಮ, ವಿ.ಆರ್.ರವಿಕುಮಾರ್, ಪ್ರಭಾಕರ್, ಜಿ.ಎನ್.ಕೃಷ್ಣಯ್ಯ, ಟಿ.ಕೆ.ವಿಜಯರಾಘವ, ಸಂಕೇತ್ ಶ್ರೀರಾಮ್, ಜಿ.ಸಿ.ಸತೀಶ್ ಕುಮಾರ್, ಅರುಣ್ ಕುಮಾರ್, ನರಸಿಂಹಮೂರ್ತಿ, ಚಂದ್ರಶೇಖರ್, ವೆಳಪಿಮೂರ್ತಿ, ಶಾಂತರಾಜು, ಸುರೇಶ್ ಕುಮಾರ್, ಮಂಜುನಾಥ್, ಅಶ್ವತ್ಥಗೌಡ, ವಿರೂಪಾಕ್ಷಗೌಡ, ವೆಳಪಿ ಆನಂದ್, ಲಕ್ಷ್ಮಿಪತಿ, ಎಚ್.ಎಂ.ಆದಿನಾರಾಯಣ ಗೌಡ, ವಿಜಿಕುಮಾರ್, ಎ.ಎಸ್.ಜಗನ್ನಾಥ್, ಜಿ.ವಿ.ಲೋಕೇಶ್ ಗೌಡ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.