ಚಿಕ್ಕಬಳ್ಳಾಪುರ: ತಾಲ್ಲೂಕಿನ ಶ್ರೀನಿವಾಸಸಾಗರ ಜಲಾಶಯದ ಬಳಿಯ ಗಂಗಮ್ಮನ ವಿಗ್ರಹದ ಮೇಲೆ ಯುವತಿಯರು ಕಾಲಿಟ್ಟಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಶ್ರೀನಿವಾಸ ಸಾಗರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ. ಜಲಾಶಯ ತುಂಬಿ ಹರಿಯುತ್ತಿದೆ. ನಿತ್ಯ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ಜಲಾಶಯದ ತಡೆಗೋಡೆ ದಾಟಿ ನೀರು ಧುಮ್ಮಿಕ್ಕುತ್ತದೆ. ಈ ಪ್ರದೇಶದಲ್ಲಿ ಪ್ರವಾಸಿಗರು ನೀರಿನಲ್ಲಿ ಮೀಯ್ಯುವರು. ಜಲಾಶಯದ ಬಳಿ ಈ ಸ್ಥಳ ಪ್ರವಾಸಿಗರ ನೆಚ್ಚಿನ ತಾಣ.
ತಡೆಗೋಟೆ ದಾಟಿ ನೀರು ಬೀಳುವ ಸ್ಥಳದ ನಡುವೆ ಗಂಗಮ್ಮನ ವಿಗ್ರಹ ಸಹ ಇರಿಸಲಾಗಿದೆ. ಆ ವಿಗ್ರಹದ ಮೇಲೆ ಕಾಲಿಟ್ಟು ಯುವತಿಯರು ಫೋಟೊಗಳನ್ನು ತೆಗೆಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.