ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧೆಡೆ ಭಾರಿ ಮಳೆ: ದ್ರಾಕ್ಷಿ ತೋಟ, ಸೇತುವೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 23:25 IST
Last Updated 19 ಸೆಪ್ಟೆಂಬರ್ 2025, 23:25 IST
<div class="paragraphs"><p>ಚಿಕ್ಕಬಳ್ಳಾಪುರದಿಂದ ಮಂಚನಬಲೆಗೆ ಸಾಗುವ ರಸ್ತೆ ಕೆಳ ಸೇತುವೆಯಲ್ಲಿ ತುಂಬಿದ್ದ ಮಳೆ ನೀರಿನಲ್ಲಿ ಸಿಲುಕಿದ್ದ ಕಾರಿನಿಂದ ಮಗುವನ್ನು ಹೊರಗೆ ಕರೆ ತಂದ ವೃದ್ಧ</p></div>

ಚಿಕ್ಕಬಳ್ಳಾಪುರದಿಂದ ಮಂಚನಬಲೆಗೆ ಸಾಗುವ ರಸ್ತೆ ಕೆಳ ಸೇತುವೆಯಲ್ಲಿ ತುಂಬಿದ್ದ ಮಳೆ ನೀರಿನಲ್ಲಿ ಸಿಲುಕಿದ್ದ ಕಾರಿನಿಂದ ಮಗುವನ್ನು ಹೊರಗೆ ಕರೆ ತಂದ ವೃದ್ಧ

   

ಚಿಕ್ಕಬಳ್ಳಾಪುರ: ಜಿಲ್ಲೆಯ ವಿವಿಧೆಡೆ ಗುರುವಾರ ರಾತ್ರಿ ಭಾರಿ ಮಳೆ ಸುರಿದಿದೆ. ನಗರದಿಂದ ಮಂಚನಬಲೆ ಗ್ರಾಮಕ್ಕೆ ಸಾಗುವ ರಸ್ತೆಯ ಕೆಳಸೇತುವೆ ಜಲಾವೃತವಾಗಿದೆ.

ಇಲ್ಲಿ ಕಾರುಗಳು, ಬೈಕ್‌ಗಳು ಸಿಲುಕಿದ್ದು ಚಾಲಕರು ಹೊರ ಬರಲು ಹರಸಾಹಸಪಟ್ಟರು. ಈ ಮಾರ್ಗದಲ್ಲಿ ಸಂಚಾರ ವ್ಯತ್ಯಯವಾಯಿತು. 

ADVERTISEMENT

ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ದ್ರಾಕ್ಷಿ ತೋಟ, ಹೂ ತೋಟಗಳಿಗೆ ನೀರು ನುಗ್ಗಿದೆ. ವಾಪಸಂದ್ರದ ಮುಖ್ಯರಸ್ತೆ ಜಲಾವೃತವಾಗಿದ್ದು, ಮತ್ತು ದೊಡ್ಡಮೋರಿ ತುಂಬಿ ಹರಿಯಿತು.

ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ

ಬರೂರು (ಬೀದರ್‌ ಜಿಲ್ಲೆ): ಮಳೆ ನೀರಿನಿಂದ ಮುಳುಗಿದ್ದ ಸೇತುವೆ ದಾಟುವಾಗ, ಗ್ರಾಮದ ಗದ್ದಾಮಿಧಿ ಪ್ರಭಾಕರ ರೆಡ್ಡಿ (65) ಎಂಬವರು ಕೊಚ್ಚಿ ಕೊಂಡು ಹೋದ ಘಟನೆ ತಾಲ್ಲೂಕಿನ ಬರೂರು ಸಮೀಪ ನಡೆದಿದೆ.

ಗುರುವಾರ ಗ್ರಾಮದಿಂದ ಗಂಗವಾರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಸೇತುವೆ ದಾಟುವಾಗ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. 

ಅಗ್ನಿಶಾಮಕ ಸಿಬ್ಬಂದಿ, ಮೀನುಗಾರರು ಶೋಧ ಕಾರ್ಯ ಕೈಗೊಂಡಿದ್ದು, ಶುಕ್ರವಾರ ಸಂಜೆವರೆಗೂ ಪ್ರಭಾಕರ ರೆಡ್ಡಿ ಪತ್ತೆಯಾಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.