ADVERTISEMENT

Karnataka Rains: ಮಲೆನಾಡಾದ ಚಿಕ್ಕಬಳ್ಳಾಪುರ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 4:40 IST
Last Updated 21 ಜುಲೈ 2025, 4:40 IST
<div class="paragraphs"><p>ಚಿಕ್ಕಬಳ್ಳಾಪುರದಲ್ಲಿ ಭಾನುವಾರ ರಾತ್ರಿ ಉತ್ತಮ ಮಳೆ ಸುರಿಯಿತು</p></div>

ಚಿಕ್ಕಬಳ್ಳಾಪುರದಲ್ಲಿ ಭಾನುವಾರ ರಾತ್ರಿ ಉತ್ತಮ ಮಳೆ ಸುರಿಯಿತು

   

ಚಿಕ್ಕಬಳ್ಳಾಪುರ: ಕಳೆದ ಮೂರು ದಿನಗಳಿಂದ ಚಿಕ್ಕಬಳ್ಳಾಪುರ ನಗರ ಹಾಗೂ ಗ್ರಾಮಾಂತರ ಭಾಗದ ವಾತಾವರಣವು ಮಲೆನಾಡಿನಂತೆ ಆಗಿದೆ. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ, ಆಗಾಗ್ಗೆ ತುಂತರು ಮಳೆ, ಸಂಜೆ ಆಗುತ್ತಿದ್ದಂತೆ ಜೋರು ಮಳೆ ಸುರಿಯುತ್ತಿದೆ.

ಜೂನ್ ಮತ್ತು ಜುಲೈ ಮೂರನೇ ವಾರದವರೆಗೂ ಜಿಲ್ಲೆಯಲ್ಲಿ ಮಳೆಯ ಕೊರತೆ ತೀವ್ರವಾಗಿತ್ತು. ಆದರೆ ಕಳೆದ ಮೂರು ದಿನಗಳಿಂದ ಚಿಕ್ಕಬಳ್ಳಾಪುರ ಹಾಗೂ ಜಿಲ್ಲೆಯ ಕೆಲವು ಭಾಗಗಳಲ್ಲಿ ಉತ್ತಮ ಮಳೆ ಸುರಿಯುತ್ತಿದೆ.

ADVERTISEMENT

ಸೂರ್ಯನ ದರ್ಶನವೇ ಅಪರೂಪ ಎನ್ನುವಂತೆ ಆಗಿದೆ. ತೀವ್ರ ಚಳಿ ಮತ್ತು ತಣ್ಣನೆಯ ವಾತಾವರಣವಿದೆ. ಮಳೆಯ ಕಾರಣಕ್ಕೆ ಸಂಜೆ ಆಗುತ್ತಿದ್ದಂತೆ ವ್ಯಾಪಾರಿಗಳು ವಹಿವಾಟುಗಳನ್ನು ಬಂದ್ ಮಾಡುತ್ತಿದ್ದಾರೆ.

ಇಲ್ಲಿಯವರೆಗೆ ನಿಧಾನಗತಿಯಲ್ಲಿದ್ದ ಮುಂಗಾರು ಬಿತ್ತನೆಯ ಚಟುವಟಿಕೆಗಳು ಮಳೆಯ ಕಾರಣದಿಂದ ಗರಿಗೆದರಿದೆ.

ಚಿಕ್ಕಬಳ್ಳಾಪುರದಲ್ಲಿ ಭಾನುವಾರ ರಾತ್ರಿಯೂ ಉತ್ತಮ ಮಳೆ ಸುರಿಯಿತು. ಚರಂಡಿಗಳು, ರಸ್ತೆಗಳ ಮೇಲೆ ದೊಡ್ಡ ಪ್ರಮಾಣದಲ್ಲಿಯೇ ನೀರು ಹರಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.