ADVERTISEMENT

ಚಿಕ್ಕಬಳ್ಳಾಪುರ: ನಂದಿ ರಥೋತ್ಸವಕ್ಕೆ ಸಿದ್ಧವಾಗುತ್ತಿವೆ ತೇರು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 5:24 IST
Last Updated 15 ಫೆಬ್ರುವರಿ 2026, 5:24 IST
ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿ ಯೋಗ ಮತ್ತು ಭೋಗ ನಂದೀಶ್ವರ ರಥಗಳು ಸಿದ್ಧಗೊಳ್ಳುತ್ತಿರುವುದು 
ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿ ಯೋಗ ಮತ್ತು ಭೋಗ ನಂದೀಶ್ವರ ರಥಗಳು ಸಿದ್ಧಗೊಳ್ಳುತ್ತಿರುವುದು    

ಚಿಕ್ಕಬಳ್ಳಾಪುರ: ತಾಲ್ಲೂಕಿನ ಐತಿಹಾಸಿಕ ನಂದಿ ಗ್ರಾಮದಲ್ಲಿ ಮಹಾಶಿವರಾತ್ರಿ ಅಂಗವಾಗಿ ಜರುಗುವ ಯೋಗ ಮತ್ತು ಭೋಗ ನಂದೀಶ್ವರ ಬ್ರಹ್ಮರಥೋತ್ಸವಕ್ಕೆ ತೇರುಗಳನ್ನು ಕಟ್ಟುವ ಕಾರ್ಯ ಭರದಿಂದ ನಡೆದಿದೆ.  ಫೆ.16ರ ಸೋಮವಾರ ಮಧ್ಯಹ್ನ ರಥೋತ್ಸವ ಜರುಗಲಿದೆ.

ಜಾತ್ರೆ ಆರಂಭವಾಗಿದೆ ಎನ್ನುವಾಗಲೇ ರಥವನ್ನು ಕಟ್ಟು ಕೆಲಸ ಆರಂಭವಾಗುತ್ತದೆ. ವಿವಿಧ ಸಮುದಾಯಗಳ ಜನರು ಒಗ್ಗೂಡಿ ಶ್ರದ್ಧೆ ಮತ್ತು ಭಕ್ತಿಯಿಂದ ತೇರು ಕಟ್ಟುವರು. ದೇಗುಲದ ಆವರಣದಲ್ಲಿಯೇ ತೇರನ್ನು ಕಟ್ಟಲಾಗುತ್ತದೆ. 

 ಪೂಜೆ ಸಲ್ಲಿಸುವ ಮೂಲಕ ವಿಧ್ಯುಕ್ತವಾಗಿ ತೇರು ಕಟ್ಟುವ ಕಾರ್ಯ ಆರಂಭವಾಗುತ್ತದೆ. ನಂತರ ತೆಂಗಿನ ಮರದ ದಿಮ್ಮಿಗಳು ಸೇರಿದಂತೆ ವಿವಿಧ ಮರಗಳಿಂದ ತೇರನ್ನು ಕಟ್ಟಲಾಗುತ್ತದೆ. ರಥೋತ್ಸವಕ್ಕೆ ಎರಡು ಮೂರು ದಿನಗಳು ಇವೆ ಎನ್ನುವಷ್ಟರಲ್ಲಿ ಎರಡು ರಥಗಳು ಸಿದ್ಧವಾಗಿರಬೇಕು. 

ADVERTISEMENT

ಶನಿವಾರ ದೇಗುಲದ ಆವರಣದಲ್ಲಿ ತೇರನ್ನು ಕಟ್ಟುತ್ತಿದ್ದು ಭೋಗ ನಂದೀಶ್ವರನ ದರ್ಶನಕ್ಕೆ ಬರುವ ಭಕ್ತರು ಅಚ್ಚರಿಯಿಂದ ಈ ಕಾರ್ಯವನ್ನು ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.