ADVERTISEMENT

ಚಿಕ್ಕಬಳ್ಳಾಪುರ | ಅಪಘಾತ: ಕೂಲಿ ಕಾರ್ಮಿಕರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 18:08 IST
Last Updated 24 ಫೆಬ್ರುವರಿ 2026, 18:08 IST
<div class="paragraphs"><p>ಅಪಘಾತ</p></div>

ಅಪಘಾತ

   

ಸಾಂದರ್ಭಿಕ ಚಿತ್ರ

ಚಿಕ್ಕಬಳ್ಳಾಪುರ: ಆಲೂಗಡ್ಡೆ ತುಂಬಿಕೊಂಡು ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟ ಕಡೆ ಸಾಗುತ್ತಿದ್ದ ಕ್ಯಾಂಟರ್ ನಾಯನಹಳ್ಳಿ ಬಳಿ ಎದುರಿಗೆ ಬಂದ ಗೂಡ್ಸ್ ವಾಹನಕ್ಕೆ ಡಿಕ್ಕಿಯಾಗಿದೆ. ಮಂಗಳವಾರ ರಾತ್ರಿ 7ರ ಸುಮಾರಿಗೆ ಅಪಘಾತ ಸಂಭವಿಸಿದೆ. 

ADVERTISEMENT

ಈ ಪರಿಣಾಮ ಗೂಡ್ಸ್ ವಾಹನದಲ್ಲಿದ್ದ 10 ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ. ಕೂಲಿ ಕಾರ್ಮಿಕರು ಅಜ್ಜವಾರ ಮತ್ತು ಗುಂಡ್ಲಗುರ್ಕಿಯವರಾಗಿದ್ದಾರೆ. ಜಂಗಮಕೋಟೆ ಬಳಿ ಶುಂಠಿ ಹೊಲದ ಕೆಲಸಕ್ಕೆ ತೆರಳಿ ವಾಪಸ್ಸಾಗುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.