
ಬಂಧನ (ಸಾಂದರ್ಭಿಕ ಚಿತ್ರ)
ಚಿಕ್ಕಬಳ್ಳಾಪುರ: ತನ್ನ ತಾಯಿಯನ್ನು ತೀವ್ರವಾಗಿ ಥಳಿಸಿ ಅವರ ಮೇಲೆ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದ ಕ್ರೂರಿಗೆ ಇಲ್ಲಿನ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಗುಡಿಬಂಡೆ ತಾಲ್ಲೂಕಿನ ಹಳ್ಳಿಯೊಂದರಲ್ಲಿ ತನ್ನ ತಾಯಿ ಮತ್ತು ತಂದೆ ಜೊತೆ 38 ವರ್ಷದ ಅಪರಾಧಿ ವಾಸಿಸುತ್ತಿದ್ದ. ಅಪರಾಧಿಗೆ ವಿವಾಹವಾಗಿದ್ದು ಆತನ ಪತ್ನಿ ಸಹ ದೂರವಾಗಿದ್ದರು.
2024ರ ಆ.4ರಂದು ರಾತ್ರಿ ಮದ್ಯ ಸೇವಿಸಿ ಬಂದು ತನ್ನ ತಾಯಿಗೆ ರಕ್ತ ಬರುವಂತೆ ಹಲ್ಲೆ ನಡೆಸಿದ್ದ. ಕಿರುಚಾಡಿದರೂ ಬಿಡದೆ ಅವರನ್ನು ಮನೆ ಸಮೀಪದ ತಿಪ್ಪೆಯ ಬಳಿಗೆ ಎಳೆದುಕೊಂಡು ಅತ್ಯಾಚಾರ ಎಸಗಿದ್ದ. ಈ ಸಂಬಂಧ ಗುಡಿಬಂಡೆ ಠಾಣೆಗೆ ಆತನ ತಾಯಿ ದೂರು ನೀಡಿದ್ದರು.
ಗುಡಿಬಂಡೆ ಸಿಪಿಐ ನಯಾಜ್ ಬೇಗ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ಎಸ್.ವಿ ಅವರು ವಿಚಾರಣೆ ನಡೆಸಿದ್ದರು. ಅಪರಾಧಿಗೆ ಜೀವಾವಧಿ ಶಿಕ್ಷೆ ಜೊತೆಗೆ ₹ 25 ಸಾವಿರ ದಂಡ ಸಹ ವಿಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.