ADVERTISEMENT

ದೀಪಾವಳಿ ಅಂಗವಾಗಿ ಪ್ರವಚನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 3:10 IST
Last Updated 28 ಅಕ್ಟೋಬರ್ 2025, 3:10 IST
ಚಿಂತಾಮಣಿ ತಾಲ್ಲೂಕಿನ ಕೈವಾರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಶಾಖೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ
ಚಿಂತಾಮಣಿ ತಾಲ್ಲೂಕಿನ ಕೈವಾರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಶಾಖೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ   

ಚಿಂತಾಮಣಿ: ತಾಲ್ಲೂಕಿನ ಕೈವಾರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಶಾಖೆಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಇತ್ತೀಚೆಗೆ ಪ್ರವಚನ ಹಮ್ಮಿಕೊಳ್ಳಲಾಯಿತು. 

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಸಂಚಾಲಕಿ ಬಿ.ಕೆ. ಸರೋಜ ಮಾತನಾಡಿ, ‘ಜ್ಞಾನ ಮತ್ತು ಯೋಗದಿಂದ ಆತ್ಮಕ್ಕೆ ಬಲ ಮತ್ತು ಆತ್ಮಗಳ ಪರಿವರ್ತನೆಯಿಂದ ಪ್ರಕೃತಿ ಪರಿವರ್ತನೆಯಾಗಲಿದೆ. ಪ್ರಕೃತಿಯ ಪರಿವರ್ತನೆಯಿಂದ ವೈಕುಂಠದ ಸ್ವರ್ಗ ಸ್ಥಾಪನೆಯಾಗಲಿದೆ’ ಎಂದು ಹೇಳಿದರು. 

ಕಲಿಯುಗದ ಘೋರ ಕತ್ತಲೆಯಿಂದ ಸತ್ಯಯುಗದ ಪ್ರಕಾಶದೆಡೆಗೆ ಕರೆದೊಯ್ಯುವ ಜ್ಞಾನವೇ ದೀಪಾವಳಿ. ವಿಶ್ವದ ಆತ್ಮಗಳನ್ನು ಬೆಳಗಿಸುವ ಜ್ಯೋತಿ, ಅಜ್ಞಾನದ ಅಂಧಕಾರವನ್ನು ಜ್ಞಾನದಿಂದ ಬೆಳಗಿಸುವ ಹಬ್ಬವೇ ದೀಪಾವಳಿ. ದೇಹದ ಅಹಂಕಾರ ಅಳಿದಾಗ ಆತ್ಮದ ಜ್ಯೋತಿ ಬೆಳಗುವುದೇ ಸತ್ಯ ದೀಪಾವಳಿ ಎಂದರು.

ADVERTISEMENT

ಶಿಕ್ಷಕ ಶ್ರೀಧರ್ ಹಿರೇಮಠ ಮಾತನಾಡಿ, ಕುಂಬಾರ ಮಾಡಿದ ಹಣತೆ, ರೈತ ಬೆಳೆದ ಹತ್ತಿ, ಗಾಣಿಗೆ ತಯಾರಿಸಿದ ಎಣ್ಣೆಯಿಂದ ದೀಪ ಬೆಳಗುತ್ತದೆ. ದೀಪದ ಧರ್ಮ ಬೆಳಕು ನೀಡುವುದು. ಯಾವುದೇ ಧರ್ಮದವರು ದೀಪ ಹಚ್ಚಿದರೂ ಬೆಳಕು ನೀಡುತ್ತದೆ. ದೀಪಕ್ಕೆ ಯಾವುದೇ ಧರ್ಮವಿಲ್ಲ ಎಂದು ಹೇಳಿದರು.

ನಿತಿನ್ ಕೃಷ್ಣನ ವೇಷ, ಸೃಜನ ಮತ್ತು ನಿಖಿತಾ ಲಕ್ಸ್ಮಿ ಸರಸ್ವತಿ ವೇಷ ಧರಿಸಿದ್ದರು. ಎಲ್ಲರೂ ದೀಪ ಹಚ್ಚಿ ತದೇಕಚಿತ್ತಾದಿಂದ ನೋಡುತ್ತಾ, ಈ ದೀಪದಂತೆ ನಮ್ಮ ಆತ್ಮ ಬೆಳಗಲಿ, ನಮ್ಮಲ್ಲಿ ಇರುವ ಅಜ್ಞಾನ ತೊಲಗಿಸಿ ಜ್ಞಾನದ ಬೆಳಕು ನೀಡಲಿ ಎಂದು ಪ್ರಾರ್ಥನೆ ಮಾಡಿದರು.

ರಮಾದೇವಿ, ಪಿಳ್ಳನ್ನ, ಪುಷ್ಪಲತಾ, ಕೃಷ್ಣ, ಶಾರದಾ, ಪ್ರಜ್ಞಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.