ADVERTISEMENT

ಚಿಂತಾಮಣಿ: ಚಿನ್ನ ಕಳ್ಳತನ ಮಾಡಿದ್ದ ಆರೋಪಿಯ ಬಂಧನ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 6:52 IST
Last Updated 21 ಫೆಬ್ರುವರಿ 2026, 6:52 IST
ಕಳ್ಳತನ ಮಾಡಿದ್ದ ಆರೋಪಿ
ಕಳ್ಳತನ ಮಾಡಿದ್ದ ಆರೋಪಿ   

ಚಿಂತಾಮಣಿ: ನಗರದ ಆಜಾದ್‌ಚೌಕದಲ್ಲಿ ಫೆ. 9ರಂದು ರಾತ್ರಿ ಚಿನ್ನದ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ 25ನೇ ವಾರ್ಡ್‌ನ ಎನ್‌ಎನ್‌ಟಿ ರಸ್ತೆಯ ಕೂಲಿ ಕೆಲಸ ಮಾಡುವ ಅರವಿಂದಕುಮಾರ್‌ ಬಂಧಿತ ಆರೋಪಿ. ಆರೋಪಿಯಿಂದ ₹45,200 ಬೆಲೆ ಬಾಳುವ ಬೆಳ್ಳಿಯ ಆಭರಣ ವಶಪಡಿಸಿಕೊಳ್ಳಲಾಗಿದೆ.

ಕಳ್ಳರು ಅಂಗಡಿಯ ಬೀಗ ಮುರಿದು ಬೆಲೆ ಬಾಳುವ ಬೆಳ್ಳಿಯ ಆಭರಣ ಕಳ್ಳತನವಾಗಿದೆ. ಲಾಕರ್‌ ತೆಗೆಯಲು ಸಾಧ್ಯವಾಗಿಲ್ಲದ ಕಾರಣ ಹೆಚ್ಚಿನ ಆಭರಣ ಕಳ್ಳತನವಾಗಿಲ್ಲ ಎಂದು ಜ್ಯೂಯೆಲರಿ ಮಾಲೀಕ ಶಿವಕುಮಾರ್ ನಗರ ಠಾಣೆಗೆ ದೂರು ನೀಡಿದ್ದರು.

ADVERTISEMENT

ಉಪವಿಭಾಗದ ಡಿವೈಎಸ್ಪಿ ಮುರಳೀಧರ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ವಿಜಿಕುಮಾರ್ ನೇತೃತ್ವದಲ್ಲಿ ತನಿಖೆ ಕೈಗೊಂಡು ಪತ್ತೆ ಕಾರ್ಯಕ್ಕೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ಪಿಎಸ್‌ಐ ಪ್ರಕಾಶ್, ಮಂಜುನಾಥ, ವೆಂಕಟ್, ವಿಶ್ವನಾಥ ಎಸ್.ಎನ್, ಶ್ರೀನಿವಾಸಮೂರ್ತಿ ,ಲೋಕೇಶ್, ಗಿರೀಶ್ ಪಾಲ್ಗೊಂಡಿದ್ದರು.

ಚಿಂತಾಮಣಿಯ ಅಜಾದ್‌ ಚೌಕದ ಚಿನ್ನದ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.