ADVERTISEMENT

ಕೈವಾರ ಬೆಟ್ಟದಲ್ಲಿ ದೀಪೋತ್ಸವ ನಾಳೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 19:59 IST
Last Updated 31 ಡಿಸೆಂಬರ್ 2025, 19:59 IST

ಚಿಂತಾಮಣಿ: ತಾಲ್ಲೂಕಿನ ಕೈವಾರದ ಬೆಟ್ಟದ ಮೇಲೆ ನೆಲೆಸಿರುವ ಚಾಮುಂಡೇಶ್ವರಿ ದೇವಿಯ 27ನೇ ವಾರ್ಷಿಕ ದೀಪೋತ್ಸವ ಹೊಸ ವರ್ಷದ ಮೊದಲು ದಿನ ಗುರುವಾರ ನಡೆಯಲಿದೆ ಎಂದು ಚಾಮುಂಡೇಶ್ವರಿ ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.

ಪ್ರತಿವರ್ಷದಂತೆ ಚಾಮುಂಡೇಶ್ವರಿ ದೇವಿಗೆ ಬೆಳಗ್ಗೆ 8 ಗಂಟೆಗೆ ವಿಶೇಷ ಪೂಜೆ ಹಾಗೂ ಅಲಂಕಾರ ಸೇವೆ ಹಮ್ಮಿಕೊಳ್ಳಲಾಗಿದೆ. ನಂತರ ಭಕ್ತರಿಂದ ಅನ್ನದಾನ ಹಾಗೂ ಮುತ್ತೈದೆಯರಿಗೆ ಬಳೆ ಸೇವೆ ಏರ್ಪಡಿಸಲಾಗಿದೆ.

ಸಂಜೆ 6 ಗಂಟೆಗೆ ಬೆಟ್ಟದ ಪ್ರತಿ ಮೆಟ್ಟಿಲುಗಳ ಮೇಲೆ ದೀಪ ಬೆಳಗಿಸುವ ಕಾರ್ಯಕ್ರಮ ಮತ್ತು ಬೆಟ್ಟಕ್ಕೆ ವಿಶೇಷ ವಿದ್ಯುತ್ ದೀಪ ಅಲಂಕಾರ ವ್ಯವಸ್ಥೆ ಮಾಡಲಾಗುವುದು.

ADVERTISEMENT

ಗುರುವಾರ ಕೈವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಯೋಗಿ ನಾರೇಯಣ ಯತೀಂದ್ರರ ಅಲಂಕೃತ ಉತ್ಸವ ಮೆರವಣಿಗೆ ಕಾರ್ಯಕ್ರಮವನ್ನು ಸಕಲ ವಾದ್ಯ ಮೇಳಗಳೊಂದಿಗೆ ಹಮ್ಮಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.