ADVERTISEMENT

ಕಾಂಗ್ರೆಸ್‌ನಿಂದ ಖಜಾನೆ ಲೂಟಿ

ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 5:39 IST
Last Updated 7 ಡಿಸೆಂಬರ್ 2025, 5:39 IST
ಚಿಂತಾಮಣಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು
ಚಿಂತಾಮಣಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು   

ಚಿಂತಾಮಣಿ: ರಾಜ್ಯದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ನಗರದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಶನಿವಾರ ಪ್ರತಿಭಟಿಸಿದರು. ನಂತರ ತಹಶೀಲ್ದಾರರಿಗೆ ಮನವಿ  ಸಲ್ಲಿಸಿದರು.

ಚಿಂತಾಮಣಿ ನಗರದ ಆಜಾದ್ ಚೌಕದಿಂದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಮೆರವಣಿಗೆ ನಡೆಸಿದರು,ಮೆರವಣಿಗೆಯಲ್ಲಿ ಕಾಂಗ್ರೆಸ್ ಸರ್ಕಾರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷರಾದ ಸೀಕಲ್ ರಾಮಚಂದ್ರಗೌಡ ರವರು ಮಾತನಾಡಿ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದ್ದು,ರಾಜ್ಯ ಸರ್ಕಾರ ಕುರ್ಚಿ ಜಂಜಾಟದಲ್ಲಿ ಕಲಾಹರಣ ಮಾಡುತ್ತಿದೆ.ಪ್ರತಿ ದಿನ ಟಿವಿ ಹಾಗೂ ಪತ್ರಿಕೆಗಳಲ್ಲಿ ಧಾರಾವಾಹಿ ರೂಪದಲ್ಲಿ ಅಧಿಕಾರ ಗದ್ದುಗೆ ಯಾರಿಗೆ,ನೀನಾ,ನಾನಾ ಎಂಬಂತೇ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಹಗ್ಗಜಗ್ಗಾಟದಲ್ಲಿ ತೊಡಗಿದ್ದಾರೆ.ಇದರಿಂದ ರೈತರ ಜ್ವಲಂತ ಸಮಸ್ಯೆಗಳನ್ನು ಕೇಳುವವರು ಇಲ್ಲವಾಗಿದ್ದಾರೆ,ಐದು ಗ್ಯಾರಂಟಿ ನೀಡಿದ್ದೇವೆ ಎಂದು ಜನರನ್ನು ನಂಬಿಸಿ, ಖಜಾನೆಯನ್ನು ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು.

ADVERTISEMENT

ರೈತರು ಬೆಳೆದ ಮೆಕ್ಕ ಜೋಳಕ್ಕೆ ಬೆಂಬಲ ಬೆಲೆ ನೀಡಿ,ಖರೀದಿ ಮಾಡಲು ರಾಜ್ಯ ಸರ್ಕಾರ ಮುಂದಾಗಿಲ್ಲ ಜಿಲ್ಲೆಯಲ್ಲಿ ಕೆರೆಗಳಿಗೆ ಕಬಿನಿ ನಿಂದ ನೀರು ತುಂಬಿಸುವ ಪೈಪ್ ಕೆಟ್ಟು ತಿಂಗಳುಗಳೇ ಕಳೆದಿದೆ.ಇನ್ನು ಸಹ ದುರಸ್ತಿ ಮಾಡುತ್ತಿಲ್ಲ.ಬಡವರು ಹಾಗೂ ಮಧ್ಯಮ ವರ್ಗಗಳ ವಿರೋಧಿಯಾಗಿರುವ ಕಾಂಗ್ರೆಸ್ ಸರ್ಕಾರ ಜನರಿಗೆ 10 ರೂ. ನೀಡಿ, ದುಬಾರಿ ತೆರಿಗೆಗಳನ್ನು ವಿಧಿಸಿ,100 ರೂ. ಪಡೆದುಕೊಳ್ಳುತ್ತಿದೆ. ಇಂಥ ನೀತಿಗೆಟ್ಟ ಸರ್ಕಾರ ನಮಗೆ ಬೇಕಾ ಎಂದು ಪ್ರಶ್ನೆ ಮಾಡಿದರು.

ಬಿಜೆಪಿ ಮುಖಂಡರಾದ ವೇಣುಗೋಪಾಲ್ ಮಾತನಾಡಿ ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರನ್ನು ಮರೆತಿದೆ. ರೈತರ ಕಣ್ಣೀರಿಗೆ ಕಾರಣವಾಗಿದ್ದು ರೈತರ ಶಾಪ ತಟ್ಟಲಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರವು ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಿದ್ದರೂ ರಾಜ್ಯ ಸರ್ಕಾರವು ಮೆಕ್ಕೆಜೋಳದ ಖರೀದಿ ಕೇಂದ್ರ ಆರಂಭಿಸಿಲ್ಲ.ರಾಜ್ಯದ ರೈತರು ಅನೇಕ ಸಮಸ್ಯೆ ಎದುರಿಸುತ್ತಿದ್ದು ಇದ್ಯಾವುದರ ಗೊಡವೆಯೂ ನಮಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ಕಿವಿ ಕೇಳಿಸದ,ಮಾತನಾಡಲು ಬಾರದದಂತ ಸರ್ಕಾರವಾಗಿದೆ ಎಂದರು.

ಪ್ರತಿಭಟನೆಯಲ್ಲಿ ಕೆ ಎಂ ರಾಜಶೇಖರ್ ರೆಡ್ಡಿ,ಅರುಣ್ ಬಾಬು,ನಿಕಟ ಪೂರ್ವ ಅಧ್ಯಕ್ಷ ಮಹೇಶ್ ಬೈ,ನಗರ ಅಧ್ಯಕ್ಷ ಗೋವಿಂದ ರಾಜು,ಗಾಜಾಲ ಶಿವ,ಆಂಜಪ್ಪ, ದೇವರಾಜ್,ಕುರುಟಹಳ್ಳಿ ಡಾಬಾ ಮಂಜುನಾಥ್, ಪ್ರದೀಪ್,ರೈತ ಮುಖಂಡ ತ್ಯಾಗರಾಜ್,ಬನಹಳ್ಳಿ ಮಂಜುನಾಥ್,ಆಂಜನೇಯ ರೆಡ್ಡಿ,ಪ್ರದೀಪ್,ಬಟ್ಲಹಳ್ಳಿ ಶಿವಣ್ಣ,ಶಿವಾರೆಡ್ಡಿ,ಮಂಜುನಾಥ್,ಆಂಜನೇಯ ರೆಡ್ಡಿ, ಅಶೋಕ್,ಶೃತಿ,ದೇವರಾಜ್,ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.