ADVERTISEMENT

ಮಣ್ಣು ಹೊತ್ತು ಮನರೇಗಾ ಬಚಾವ್ ಸಂಗ್ರಾಮಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ, ಡಿಕೆಶಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 13:38 IST
Last Updated 23 ಫೆಬ್ರುವರಿ 2026, 13:38 IST
   

ಚಿಕ್ಕಬಳ್ಳಾಪುರ: ‘ಮನರೇಗಾ’ ಮರುಸ್ಥಾಪಿಸಬೇಕು, ‘ವಿಬಿ–ಜಿ ರಾಮ್‌ ಜಿ’ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಇಲ್ಲಿ ಹಮ್ಮಿಕೊಂಡಿದ್ದ ‘ಮನರೇಗಾ ಬಚಾವ್ ಸಂಗ್ರಾಮ’ ಪ್ರತಿಭಟನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಣ್ಣು ಹೊತ್ತು ಗಮನ ಸೆಳೆದರು.

ಸಿದ್ದರಾಮಯ್ಯ ಅವರು ಬಾಂಡ್ಲಿಗಳಿಗೆ ಗುದ್ದಲಿಯಿಂದ ಮಣ್ಣು ತುಂಬಿಸಿದರು. ಆ ಬಾಂಡ್ಲಿಗಳನ್ನು ಅವರು ಸೇರಿದಂತೆ ವೇದಿಕೆಯಲ್ಲಿದ್ದವರು ತಲೆಮೇಲೆ ಹೊತ್ತುಕೊಳ್ಳುವ ಮೂಲಕ ‘ಸಂಗ್ರಾಮ’ಕ್ಕೆ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT