ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಗುಡಿಬಂಡೆ: ರಾಷ್ಟ್ರೀಯ ಹೆದ್ದಾರಿ 44ರ ಜಯಂತಿ ಗ್ರಾಮದ ಬಳಿಯ ಹೋಟೆಲ್ ಬಳಿ ನಿಂತಿದ್ದ ಕಂಟೈನರ್‌ನಲ್ಲಿ ಕಳ್ಳತನವಾಗಿದೆ. ಈ ಸಂಬಂಧ ಗುಡಿಬಂಡೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂಟೈನರ್ ಚಾಲಕರೇ ಈ ಕೃತ್ಯ ಎಸಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಸಂದೀಪ್ ಟಾನ್ಸ್‌ಪೋರ್ಟ್ ಕಂಪನಿಗೆ ಸೇರಿದ ಕಂಟೈನರ್ ಹರಿಯಾಣ ರಾಜ್ಯದ ಗುರುಗ್ರಾಮದಿಂದ ತಮಿಳುನಾಡಿನ ಹೊಸೂರಿಗೆ ಅಮೆಜಾನ್ ಕಂಪನಿಯ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿತ್ತು. ರಾಜಸ್ತಾನದ ನಜೀರ್ ಹುಸೇನ್ ಮತ್ತು ಹಬೀದ್ ಕಂಟೈನರ್ ಚಾಲಕರಾಗಿದ್ದರು.
ಸಾಮಗ್ರಿಗಳು ನಿಗದಿತ ಸ್ಥಳ ತಲುಪಿಲ್ಲ.ಅಮೆಜಾನ್ ಕಂಪನಿಯವರು ಕಂಟೈನರ್ ಜಿಪಿಎಸ್ ಮಾಹಿತಿ ಪರಿಶೀಲಿಸಿದಾಗ ಗುಡಿಬಂಡೆ ತಾಲ್ಲೂಕಿನ ಜಯಂತಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 44ರ ಹೋಟೆಲ್‌ವೊಂದರ ಬಳಿ ನಿಂತಿರುವುದು ಪತ್ತೆಯಾಗಿದೆ.
ಟ್ರಾನ್ಸ್‌ಪೋರ್ಟ್ ಸಂಸ್ಥೆ ಪ್ರತಿನಿಧಿ ಸ್ಥಳಕ್ಕೆ ಬಂದಿದ್ದು ಕಂಟೈನರ್ ಬೀಗ ಮುರಿದು ಬಾಗಿಲು ತೆರೆದರು. ಪರಿಶೀಲಿಸಿದಾಗ ₹4.80 ಲಕ್ಷ ಮೌಲ್ಯದ ವಸ್ತು ಕಳ್ಳತನ ಆಗಿವೆ. ಚಾಲಕ ಪರಾರಿ ಆಗಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.