ADVERTISEMENT

ಚಿಂತಾಮಣಿ: ನೆಟ್ ಬ್ಯಾಂಕಿಂಗ್ ನೆಪದಲ್ಲಿ ವಂಚನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 16:05 IST
Last Updated 25 ಏಪ್ರಿಲ್ 2024, 16:05 IST
<div class="paragraphs"><p>ಹಣ ವಂಚನೆ (ಪ್ರಾತಿನಿಧಿಕ ಚಿತ್ರ)</p></div>

ಹಣ ವಂಚನೆ (ಪ್ರಾತಿನಿಧಿಕ ಚಿತ್ರ)

   

ಚಿಂತಾಮಣಿ: ನೆಟ್ ಬ್ಯಾಂಕಿಂಗ್ ಸೌಲಭ್ಯ ಪಡೆದುಕೊಳ್ಳಲು ಬ್ಯಾಂಕ್‌ನ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳುವಾಗ ನೀಡಿದ ಮಾಹಿತಿಯಿಂದ ಸೈಬರ್ ಖದೀಮರು ಖಾತೆಯಿಂದ ₹1,18,937 ಲಪಟಾಯಿಸಿದ್ದಾರೆ ಎಂದು ನಗರ ಪೊಲೀಸ್ ಠಾಣೆಗೆ ಗುರುವಾರ ವ್ಯಕ್ತಿಯೊಬ್ಬರೂ ದೂರು ನೀಡಿದ್ದಾರೆ.

ನಗರದ ದೊಡ್ಡಪೇಟೆಯ ಆರ್ಯವೈಶ್ಯ ಕೆ.ವಿ.ರಮೇಶಬಾಬು ಹಣ ಕಳೆದುಕೊಂಡು ದೂರು ನೀಡಿದ್ದಾರೆ. ಅವರು ನಗರದ ಎಸ್‌ಬಿಐ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದರು. ನೆಟ್ ಬ್ಯಾಂಕಿಂಗ್ ಸೇವೆಯನ್ನು ಪಡೆಯಲು ಪ್ರಯತ್ನಿಸುತ್ತಿದ್ದರು. ಏಪ್ರಿಲ್ 24ರಂದು ನೆಟ್‌ಬ್ಯಾಕಿಂಗ್ ಅಪ್ಲಿಕೇಷನ್ ನೋಡುವಾಗ ಮೊಬೈಲ್‌ಗೆ ಬಂದ ಮೆಸೇಜ್‌ನಂತೆ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ADVERTISEMENT

ಮಾಹಿತಿ ನೀಡಿದ ಸ್ವಲ್ಪ ಸಮಯದಲ್ಲೇ ಅವರ ಖಾತೆಯಿಂದ ₹25 ಸಾವಿರದಂತೆ 4 ಬಾರಿ ಹಾಗೂ ಒಮ್ಮೆ ₹18,937 ಸೇರಿ ಒಟ್ಟು ₹1,18,937 ಖಾತೆಯಿಂದ ವರ್ಗಾವಣೆಯಾಗಿದೆ. ಕಾನೂನು ರೀತಿ ಕ್ರಮಕೈಗೊಂಡು ಹಣ ವರ್ಗಾವಣೆ ಮಾಡಿಕೊಂಡಿರುವವರನ್ನು ಪತ್ತೆ ಮಾಡಿ ಹಣವನ್ನು ವಾಪಸ್ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.