ADVERTISEMENT

ಜನಪದದಿಂದ ದೇಸಿ ಸಂಸ್ಕೃತಿ ಜೀವಂತ: ಸಿ.ಎಚ್.ದೇವರಾಜಯ್

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 5:09 IST
Last Updated 28 ಮಾರ್ಚ್ 2021, 5:09 IST
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮುಖ್ಯಶಿಕ್ಷಕ ಸಿ.ಎಚ್. ದೇವರಾಜಯ್ಯ
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮುಖ್ಯಶಿಕ್ಷಕ ಸಿ.ಎಚ್. ದೇವರಾಜಯ್ಯ   

ಗೌರಿಬಿದನೂರು: ‘ನಮ್ಮ ನೆಲ, ಜಲ, ಪರಿಸರ ಸಂರಕ್ಷಣೆಗಾಗಿ ಜನಪದ ಕಲೆಯ ಬಗ್ಗೆ ಇಂದಿನ ಯುವಜನತೆ ಹೆಚ್ಚಿನ ಆಸಕ್ತಿ ತೋರಿದಲ್ಲಿ ಮಾತ್ರ ದೇಶೀಯ ಸಂಸ್ಕೃತಿಯನ್ನು ಉಳಿಯಲು ಸಾಧ್ಯ’ ಎಂದು ಮುಖ್ಯಶಿಕ್ಷಕ ಸಿ.ಎಚ್. ದೇವರಾಜಯ್ಯ ತಿಳಿಸಿದರು.

ತಾಲ್ಲೂಕಿನ ಕಾದಲವೇಣಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಆಯೋಜಿಸಿದ್ದ ‘ಜಾನಪದದ ಕಡೆಗೆ ನಮ್ಮ ನಡಿಗೆ’ ಎಂಬ ಕಾರ್ಯಕ್ರಮವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸಕ್ತ ದಿನಮಾನಗಳಲ್ಲಿ ನೆಲ, ಜಲ, ಪರಿಸರ ಸಂರಕ್ಷಣೆ ನಮ್ಮ ಹೊಣೆಗಾರಿಕೆಯಾಗಬೇಕು. ಭೂಮಿ ತಾಯಿ ಸಾಕಷ್ಟು ನೋವು ಸಹಿಸಿಕೊಂಡು ನಮ್ಮನ್ನು ಸಾಕುತ್ತಿದ್ದಾಳೆ. ಭೂಮಿಯು ರಾಸಾಯನಿಕ ವಸ್ತುಗಳ ಮಿಶ್ರಣದ ಬಳಕೆಯಿಂದ ಕಲುಷಿತಗೊಂಡಿದ್ದು ಇದರ ಪರಿಹಾರಕ್ಕೆ ಪರಿಸರ ಸಂರಕ್ಷಣೆಯೊಂದೇ ದಾರಿಯಾಗಿದೆ. ವಿದ್ಯಾರ್ಥಿಗಳು ಪಠ್ಯದೊಂದಿಗೆ ಪರಿಸರ ಅಧ್ಯಯನವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಸಂಘದ ಅಧ್ಯಕ್ಷ ವೈ.ಟಿ. ಪ್ರಸನ್ನಕುಮಾರ್ ಮಾತನಾಡಿ, ಸಂಘದ ವತಿಯಿಂದ ಕಳೆದ ದಶಕದಿಂದ ಜನಪದ ಪರಿಸರ ಬೀದಿನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಯೋಜನೆ ಮಾಡಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯ ನಿರಂತರವಾಗಿದೆ. ವಿದ್ಯಾರ್ಥಿಗಳು ಇದರ ಬಗ್ಗೆ ತಿಳಿದುಕೊಂಡು ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ಮಾಡಿದಾಗ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ ಎಂದು
ಹೇಳಿದರು.

ಇದೇ ಸಂದರ್ಭದಲ್ಲಿ ಕಲಾವಿದ ಚಂದ್ರಶೇಖರ್ ಜನಪದ, ಲಾವಣಿ, ಗೀಗಿಪದ, ಪರಿಸರ ಗೀತೆಗಳ ಮೂಲಕ ಕಾರ್ಯಕ್ರಮಕ್ಕೆ ಮೆಗುಗು
ನೀಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ನಾಗರಾಜು, ಭೋಜರಾಜು, ರಾಜಶೇಖರ್, ಸುಧಾಕರ ರೆಡ್ಡಿ, ಕಲಾವಿದರಾದ ಚಂದ್ರಶೇಖರ್, ಮೂರ್ತಿ, ರಾಜೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.