ADVERTISEMENT

ಗೌರಿಬಿದನೂರು | ಗಂಗೆಯಲ್ಲಿ ದುರ್ಗಾಮಾತೆ ಲೀನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 2:48 IST
Last Updated 7 ಅಕ್ಟೋಬರ್ 2025, 2:48 IST
ಗೌರಿಬಿದನೂರು ನಗರದ ಕೋಟೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸಲಾಗಿದ್ದ ದುರ್ಗಾ ಮಾತೆಯ ಪ್ರತಿಕೃತಿಯನ್ನು ಗಂಗೆಯಲ್ಲಿ ವಿಲೀನ ಮಾಡಲಾಯಿತು 
ಗೌರಿಬಿದನೂರು ನಗರದ ಕೋಟೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸಲಾಗಿದ್ದ ದುರ್ಗಾ ಮಾತೆಯ ಪ್ರತಿಕೃತಿಯನ್ನು ಗಂಗೆಯಲ್ಲಿ ವಿಲೀನ ಮಾಡಲಾಯಿತು    

ಗೌರಿಬಿದನೂರು: ದಸರಾ ಹಬ್ಬದ ಅಂಗವಾಗಿ ನಗರದ ಕೋಟಿ ಬಡಾವಣೆಯ ಪಿನಾಕಿನಿ ಯೂತ್ಸ್ ಬಳಗ ಪ್ರತಿಷ್ಠಾಪಿಸಲಾಗಿದ್ದ ದುರ್ಗಾಮಾತೆಯ ಗಂಗಾ ವಿಲೀನ ಕಾರ್ಯಕ್ರಮ ಭಾನುವಾರ ವಿಜೃಂಭಣೆಯಿಂದ ನಡೆಯಿತು.

ದಸರಾ ಹಬ್ಬದ ಹಿನ್ನೆಲೆಯಲ್ಲಿ 50 ಅಡಿಯ ಬೃಹತ್ ಶಿವಲಿಂಗ ನಿರ್ಮಾಣ ಮಾಡಿ, ಅದರೊಳಗೆ 20 ಅಡಿಯ ದುರ್ಗಾಮಾತೆ ದರ್ಶನಕ್ಕೆ ಭಕ್ತರಿಗೆ 10 ದಿನ ಸಕಲ ವ್ಯವಸ್ಥೆ ಮಾಡಿಕೊಡಲಾಗಿತ್ತು. 

ಗಂಗಾ ವಿಲೀನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ, ದುರ್ಗಾದೇವಿ ಕ್ಷೇತ್ರದ ಜನರನ್ನು ಸುಭಿಕ್ಷವಾಗಿಡಲಿ, ಇಂತಹ ಉತ್ಸವಗಳು ಜನರಲ್ಲಿ ಪರಸ್ಪರ ಸಹಬಾಳ್ವೆ ಮತ್ತು ಸೌಹಾರ್ದತೆ ಮೂಡಿಸಲಿ ಎಂದು ಆಶಿಸಿದರು.

ADVERTISEMENT

ಮಾಜಿ ಸಚಿವ ರೇಣುಕಾಚಾರ್ಯ ವಿಶೇಷ ಪೂಜೆ ಸಲ್ಲಿಸಿ, ಇಂತಹ ಉತ್ಸವಗಳು ನಾಡಿನ ಏಳ್ಗೆ ಮತ್ತು ಏಕತೆಗೆ ಸಹಕಾರಿಯಾಗಿವೆ ಎಂದರು.

ಬೃಹತ್ ವಾಹನದಲ್ಲಿ ಪುಷ್ಪಾಲಂಕಾರದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ರಾಜಗಾಂಭೀರ್ಯದಿಂದ ಸಾಗಿತು. ಕೇರಳದ ಪುಲಿ-ಕಲಿ ವೇಷಗಳ ತಂಡದ ನೃತ್ಯವು ನೋಡುಗರನ್ನು ಆಕರ್ಷಿಸಿತು. ಕೀಲುಕುದುರೆ, ಬೊಂಬೆ ನೃತ್ಯ, ವಿವಿಧ ಜಾನಪದ ಕಲಾ ತಂಡಗಳು, ತಮಟೆ ವಾದ್ಯಗಳು ಮೆರಗು ನೀಡಿದವು. ರಸ್ತೆಯ ಇಕ್ಕೆಲಗಳಲ್ಲಿ ಜನರು ಶ್ರದ್ಧಾಭಕ್ತಿಯಿಂದ ದುರ್ಗಾದೇವಿಯ ದರ್ಶನ ಪಡೆದರು.

ಮೆರವಣಿಗೆಯಲ್ಲಿ ನಗರಸಭೆ ಸದಸ್ಯ ಎ. ಮೋಹನ್, ಮುಖಂಡರಾದ ಆರ್. ಅಶೋಕ್‌ಕುಮಾರ್, ಎ.ಎನ್. ವೇಣು, ಶ್ರೀನಿವಾಸಗೌಡ, ಪಿನಾಕಿನಿ ಯೂತ್ಸ್ ನ ರವೀಂದ್ರನಾಥ್, ಮಂಜುನಾಥ್, ಬಾಬು, ಹರೀಶ್, ಮಹೇಂದ್ರ, ರಾಜುರೆಡ್ಡಿ, ಮನೋಜ್, ಎ. ಅಶ್ವತ್ಥಪ್ಪ, ಪ್ರದೀಪ್, ವೆಂಕಟಾದ್ರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.