ADVERTISEMENT

ಶಾಸಕರ ಮೇಲಿನ ಇ.ಡಿ ದಾಳಿಗೆ, ಮುನಿರಾಜುಗೆ, ಬಿಜೆಪಿಗೆ ಸಂಬಂಧ ಇಲ್ಲ: ಆರ್.ಪ್ರತಾಪ್

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 5:48 IST
Last Updated 23 ಜುಲೈ 2025, 5:48 IST
ಬಾಗೇಪಲ್ಲಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಆರ್.ಪ್ರತಾಪ್ ಮಾತನಾಡಿದರು
ಬಾಗೇಪಲ್ಲಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಆರ್.ಪ್ರತಾಪ್ ಮಾತನಾಡಿದರು   

ಬಾಗೇಪಲ್ಲಿ: ‘ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮೇಲಿನ ಇಡಿ ದಾಳಿಗೂ, ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು, ಬಿಜೆಪಿ ಮುಖಂಡರಿಗೆ ಸಂಬಂಧ ಇಲ್ಲ. ವಿನಾಃಕಾರಣ ಸಿ.ಮುನಿರಾಜು ಮೇಲೆ ಶಾಸಕರು ಸುಳ್ಳು ಆರೋಪ ಹೊರಿಸಿ ಪ್ರಕರಣ ದಾಖಲಿಸಿರುವುದು ರಾಜಕೀಯ ದುರುದ್ದೇಶ’ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಆರ್.ಪ್ರತಾಪ್ ಆರೋಪಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಶಾಸಕರು ಸಲ್ಲಿಸಿದ ನಾಮಪತ್ರದ ಜೊತೆ ಸಲ್ಲಿಸಿದ ಅಫಿಡವಿಟ್‍ನಲ್ಲಿ ಕೆಲವು ದೋಷ ಇರುವುದಾಗಿ ಮತ್ತು ಆಸ್ತಿಯನ್ನು ಮರೆ ಮಾಚಿರುವುದಾಗಿ ಸಿ.ಮುನಿರಾಜು ಹೈಕೋರ್ಟ್‌ನಲ್ಲಿ ದಾವೆ ಹೂಡಿರುವುದು ನಿಜ. ಆದರೆ ವಿದೇಶಗಳಲ್ಲಿ ಹೂಡಿಕೆ, ಬ್ಯಾಂಕ್ ಖಾತೆ ಹೊಂದಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಆಗಲಿ, ಬಿಜೆಪಿ ಮುಖಂಡರಾಗಲಿ ನಕಲಿ ದಾಖಲೆ ಸೃಷ್ಠಿ ಮಾಡಿಲ್ಲ. ನಾವು ಇಡಿಗೆ ದಾಖಲೆ ನೀಡಿಲ್ಲ’ ಎಂದರು.

ಸುಬ್ಬಾರೆಡ್ಡಿ ಮೇಲೆ ಇಡಿ ದಾಳಿಗೂ, ನಮಗೆ ಸಂಬಂಧ ಇಲ್ಲ. ವಿನಾಃಕಾರಣ ರಾಜಕೀಯ ದುರುದ್ದೇಶದಿಂದ ಸಿ.ಮುನಿರಾಜು ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುವುದು ಖಂಡನೀಯ’ ಎಂದರು.

ADVERTISEMENT

ಪೊಲೀಸರು ಶಾಸಕರ ಅಣತಿಯಂತೆ ವರ್ತಿಸಿದ್ದಾರೆ. ಇಡಿಯಲ್ಲಿ ಶಾಸಕರ ಮೇಲೆ ತನಿಖೆ ಮಾಡಲು ಆರಂಭಿಸಿದ್ದಾರೆ. ಇಡಿಯ ಸತ್ಯಾಸತ್ಯತೆ ಹೊರಬರುವವರಿಗೂ ಹಾಗೂ ಚುನಾವಣಾ ಸಂದರ್ಭದಲ್ಲಿ ಸಿ.ಮುನಿರಾಜು ಹೈಕೋರ್ಟ್‌ನಲ್ಲಿ ದಾವೆ ಹೂಡುವ ಸಂದರ್ಭದಲ್ಲಿ ಶಾಸಕರು ಪ್ರಕರಣ ದಾಖಲು ಮಾಡಿಲ್ಲ. ಇದೀಗ ಇಡಿ ದಾಳಿ ಮಾಡಿದ ನಂತರ ಪ್ರಕರಣ ದಾಖಲು ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಇಡಿ ದಾಳಿಗೆ ಸಿ.ಮುನಿರಾಜು ಅವರೇ ಕಾರಣ ಎಂದು ಹೇಳಲು ತಮ್ಮ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಧರ್ಮಸ್ಥಳದ ಮಂಜುನಾಥಸ್ವಾಮಿರವರ ಮುಂದೆ ಪ್ರಮಾಣ ಮಾಡಲಿ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿಗೆ ಬಹಿರಂಗ ಸವಾಲು ಹಾಕಿದರು. ಸುಳ್ಳು ಪ್ರಕರಣವನ್ನು ವಾಪಸ್ ಪಡೆಯಬೇಕು. ಇಲ್ಲವಾದರೆ ಬಿಜೆಪಿ ಮುಖಂಡರು, ಕಾರ್ಯಕರ್ತರು ನೇತೃತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಬಿಜೆಪಿ ಎಸ್‍ಟಿ ಮೋರ್ಚಾ ಜಿಲ್ಲಾ ಮುಖಂಡ ವೆಂಕಟೇಶ್ ಮಾತನಾಡಿ, ಶಾಸಕರು ತಮ್ಮ ಅಕ್ರಮ ಆಸ್ತಿ ಉಳಿಸಲು, ತಪ್ಪುಗಳನ್ನು ಮುಚ್ಚಿಡಲು ಪೊಲೀಸರನ್ನು ಬಳಕೆ ಮಾಡಿಕೊಂಡು ವಿನಾಃಕಾರಣ ಮುನಿರಾಜು ಹಾಗೂ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡಲಾಗಿದೆ. ಶಾಸಕರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಗುಡಿಬಂಡೆ ಬಿಜೆಪಿ ಮಂಡಲ ಅಧ್ಯಕ್ಷ ಗೆಂಗಿರೆಡ್ಡಿ, ಗುಜ್ಜೇಪಲ್ಲಿ ಸುಧಾಕರರೆಡ್ಡಿ, ಚೇಳೂರು ಆಂಜನೇಯರೆಡ್ಡಿ, ರಂಗಾರೆಡ್ಡಿ, ಮಧು, ಲೋಕೇಶಕುಮಾರ್, ರಾಮಪ್ಪ, ಸುರೇಶ್, ಅಶ್ವಥ್ಥರೆಡ್ಡಿ, ರಮೇಶ್, ಮಂಜುಳ, ರೂಪ, ನಂದಿನಿ, ಕೃಷ್ಣವೇಣಿ, ಗಂಗರತ್ನಮ್ಮ, ಗಾಯಿತ್ರಿ, ರಾಧ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.