ADVERTISEMENT

ಆರೋಪ ಸಾಬೀತಾದರೆ ಆಸ್ತಿ ಬರೆದುಕೊಡುವೆ: ಸುಬ್ಬಾರೆಡ್ಡಿ

ಇ.ಡಿ ವಿಚಾರಣೆ ಎದುರಿಸಲು ಸಿದ್ಧ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 18:37 IST
Last Updated 11 ಜುಲೈ 2025, 18:37 IST
ಎಸ್.ಎನ್.ಸುಬ್ಬಾರೆಡ್ಡಿ
ಎಸ್.ಎನ್.ಸುಬ್ಬಾರೆಡ್ಡಿ   

ಬಾಗೇಪಲ್ಲಿ: ‘ವಿದೇಶಗಳಲ್ಲಿ ನನ್ನ ಹೆಸರಿನಲ್ಲಿ ಬ್ಯಾಂಕ್‌ ಖಾತೆ, ವ್ಯವಹಾರ ಇರುವುದು ಸಾಬೀತುಪಡಿಸಿದರೆ ನನ್ನ ಆಸ್ತಿಯನ್ನು ಸರ್ಕಾರಕ್ಕೆ ಬರೆದು ಕೊಡುತ್ತೇನೆ’ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.

ಬೆಂಗಳೂರಿನಲ್ಲಿ ಇರುವ ಅವರ ಮನೆ ಮತ್ತು ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ಕುರಿತು ‌ಶುಕ್ರವಾರ ಪಟ್ಟಣದಲ್ಲಿ ಪ್ರತಿಕ್ರಿಯಿಸಿದರು.

‘ಕಳೆದ ಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ ವಿದೇಶಗಳಲ್ಲಿ ಇರುವ ಖಾತೆ ಹಾಗೂ ವ್ಯವಹಾರದ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಪ್ರತಿಸ್ಪರ್ಧಿಯೊಬ್ಬರು ಕೋರ್ಟ್‌ಗೆ ಹೋಗಿದ್ದಾರೆ. ಇದು ವಿಚಾರಣೆ ಹಂತದಲ್ಲಿ ಇದೆ’ ಎಂದರು. 

ADVERTISEMENT

‘ಜುಲೈ 14ರಂದು ಹೆಚ್ಚಿನ ವಿಚಾರಣೆಗೆ ಇ.ಡಿ ಕಚೇರಿಗೆ ಬರಲು ಸೂಚನೆ ನೀಡಿದ್ದಾರೆ. ದಾಖಲೆ ಸಮೇತ ಹೋಗುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.