ADVERTISEMENT

ಶಿಡ್ಲಘಟ್ಟ | ದಿ. ಸಂತೋಷ್ ಬೆಳ್ಳೂಟಿ ನೆನಪಿನಲ್ಲಿ ಪರಿಸರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 13:45 IST
Last Updated 5 ಜೂನ್ 2025, 13:45 IST
<div class="paragraphs"><p>ಶಿಡ್ಲಘಟ್ಟದ ಹಿತ್ತಲಹಳ್ಳಿ ಬಳಿಯ ಬಸ್ ಡಿಪೊ ಆವರಣದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡಲಾಯಿತು</p></div>

ಶಿಡ್ಲಘಟ್ಟದ ಹಿತ್ತಲಹಳ್ಳಿ ಬಳಿಯ ಬಸ್ ಡಿಪೊ ಆವರಣದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡಲಾಯಿತು

   

ಶಿಡ್ಲಘಟ್ಟ: ಪರಿಸರ ಪ್ರೇಮಿ ದಿ.ಸಂತೋಷ್ ಬೆಳ್ಳೂಟಿ ಅವರ ನೆನಪಿನಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸುತ್ತಿದ್ದೇವೆ ಎಂದು ಪ್ರಗತಿಪರ ರೈತ ಹಿತ್ತಲಹಳ್ಳಿ ಸುರೇಶ್ ತಿಳಿಸಿದರು.

ತಾಲ್ಲೂಕಿನ ಹಿತ್ತಲಹಳ್ಳಿ ಬಳಿಯ ಬಸ್ ಡಿಪೊ ಆವರಣದಲ್ಲಿ ಗುರುವಾರ ಪರಿಸರ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಟ್ಟು ಅವರು ಮಾತನಾಡಿದರು.

ADVERTISEMENT

ಪರಿಸರ ಪ್ರೇಮಿ ದಿ.ಸಂತೋಷ್ ಬೆಳ್ಳೂಟಿ ಅವರು ಇಲ್ಲವಾದರೂ ಅವರು ನೆಟ್ಟ ಸಾವಿರಾರು ಸಸಿಗಳು ಇಂದು ಮರಗಳಾಗಿ ಜೀವ ಸಂಕುಲಗಳಿಗೆ ಆಶ್ರಯವನ್ನಿತ್ತಿವೆ. ಬೆಳ್ಳೂಟಿ ಗ್ರಾಮದಲ್ಲಿ ಹಸಿರು ಕ್ರಾಂತಿ ನಡೆಸಿದ್ದರು.

ರಸ್ತೆ ಬದಿ, ಖಾಲಿ ಜಾಗಗಳಲ್ಲೆಲ್ಲ ನಳನಳಿಸುವ ಗಿಡ ಮರಗಳು, ಸ್ಮಶಾನಕ್ಕೆ ಸುಂದರ ರೂಪ ನೀಡುವ ಮೂಲಕ ಶಾಂತಿಧಾಮವಾಗಿಸಿದರು. ಬೆಳ್ಳೂಟಿ ಕೆರೆಯ ನಡುಮಧ್ಯೆ ಸುಮಾರು ಆರೂವರೆ ಎಕರೆ ಬಂಡ್ (ದ್ವೀಪ) ನಿರ್ಮಿಸಿ, ಅದರಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದರು ಎಂದರು. 

ಡಿಪೊ ವ್ಯವಸ್ಥಾಪಕ ನಾಗೇಶ್, ಹಿತ್ತಲಳ್ಳಿ ಮುನಿರಾಜು, ವಸಂತ್, ಸುನಿಲ್, ಭಾರತಿ, ಅರುಣ, ಬಾಬು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.