
ಶಿಡ್ಲಘಟ್ಟ: ತಾಲ್ಲೂಕಿನ ಗಂಗನಹಳ್ಳಿ ಗ್ರಾಮದಲ್ಲಿ ಚೌಡೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ನೂತನ ಶಿಲೆಯ ಪ್ರತಿಷ್ಠಾಪನಾ ಮಹೋತ್ಸವವು ಶುಕ್ರವಾರ ಶ್ರದ್ಧಾಭಕ್ತಿಯಿಂದ ಭಕ್ತರ ಸಮ್ಮುಖದಲ್ಲಿ ನೆರವೇರಿತು.
‘ಐದು ದಿನಗಳಿಂದ ನಾನಾ ಪೂಜೆ ಪುನಸ್ಕಾರ, ಹೋಮ, ಹವನಗಳು ನಡೆದವು. ಪ್ರತಿ ನಿತ್ಯವೂ ಪೂಜೆ, ಮಹಾ ಮಂಗಳಾರತಿ ನೆರವೇರಿಸಲಾಯಿತು.
ಐದನೇ ದಿನವಾದ ಶುಕ್ರವಾರ ನೂತನ ಶಿಲಾ ವಿಗ್ರಹ ಪ್ರತಿಷ್ಠಾಪಿಸುವ ಮೂಲಕ ಜೀರ್ಣೋದ್ಧಾರ ಮತ್ತು ನೂತನ ಶಿಲಾ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು. ನೂತನ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಯಿತು.
ಈ ವೇಳೆ ಗ್ರಾಮದ ವೆಂಕಟೇಶಪ್ಪ ಮಾತನಾಡಿ, ಗಂಗನಹಳ್ಳಿಯ ಪುರಾತನ ಚೌಡೇಶ್ವರಿ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ ಅತ್ಯಂತ ವೈಭವದಿಂದ ಪುನರ್ ಪ್ರತಿಷ್ಠಾಪಿಸಲಾಗಿದೆ. ಸಂಪೂರ್ಣ ಕಲ್ಲಿನ ಕಟ್ಟಡ ಹಾಗೂ ಸುಂದರ ಶಿಖರದ ಈ ದೇವಾಲಯವನ್ನು ಗ್ರಾಮಸ್ಥರೆಲ್ಲರೂ ಸೇರಿ ದಾನಿಗಳ ನೆರವಿನಿಂದ ನಿರ್ಮಿಸಲಾಗಿದೆ. ಜೀರ್ಣೋದ್ಧಾರ ಸಮಿತಿ ಸದಸ್ಯರ ಶ್ರಮದಿಂದ ಈ ಕಾರ್ಯ ಯಶಸ್ವಿಯಾಗಿದೆ ಎಂದರು.
ಯಕ್ಷಗಾನ ಪ್ರದರ್ಶನವೂ ನಡೆಯಿತು.
ವಿ.ಮುನಿಯಪ್ಪ, ಎಂ.ರಾಜಣ್ಣ, ಪುಟ್ಟು ಆಂಜಿನಪ್ಪ, ಸಂಜಯ್ ಗೌಡ, ಮೇಲೂರು ಮಂಜುನಾಥ್, ಬಿ.ಸಿ.ವೆಂಕಟೇಶಪ್ಪ, ಜಿ.ವಿ.ಸುರೇಶ್, ವೆಂಕಟರೆಡ್ಡಿ, ಪ್ರಕಾಶ್, ರಾಜೇಶ್, ಸಂದೀಪ್ ಗೌಡ, ಡಾ.ಮಧುಕರ್, ವಿ.ಚೈತ್ರಾ, ಮುನಿರಾಜು, ಸೊಣ್ಣೇಗೌಡ, ಕೃಷ್ಣಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.