ADVERTISEMENT

ಗೌರಿಬಿದನೂರು: ದೊಡ್ಡ ಹುಸೇನ್‌ಪುರ ಡೇರಿಗೆ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 6:06 IST
Last Updated 24 ಫೆಬ್ರುವರಿ 2026, 6:06 IST
ಗೌರಿಬಿದನೂರು ತಾಲ್ಲೂಕಿನ ದೊಡ್ಡ ಹುಸೇನ್‌ಪುರ ಡೇರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ಸೋಮವಾರ ನಡೆಯಿತು
ಗೌರಿಬಿದನೂರು ತಾಲ್ಲೂಕಿನ ದೊಡ್ಡ ಹುಸೇನ್‌ಪುರ ಡೇರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ಸೋಮವಾರ ನಡೆಯಿತು   

ಗೌರಿಬಿದನೂರು: ತಾಲ್ಲೂಕಿನ ದೊಡ್ಡ ಹುಸೇನ್‌ಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿದ್ದಪ್ಪ ಹಾಗೂ ಉಪಾಧ್ಯಕ್ಷರಾಗಿ ತಿಮ್ಮೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಸಂಘದ 13 ನಿರ್ದೇಶಕರ ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ ಹನ್ನೊಂದು ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ ಎರಡು ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದ ಕಾರಣ ಖಾಲಿ ಉಳಿದಿದ್ದವು.

ಸೋಮವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಆಯ್ಕೆಗಾಗಿ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಸಿದ್ದಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಿಮ್ಮೆಗೌಡ ನಾಮಪತ್ರ ಸಲ್ಲಿಸಿದ್ದರು. ಇಬ್ಬರನ್ನು ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಅವಿರೋಧವಾಗಿ ಆಯ್ಕೆ ಮಾಡಿದರು.

ADVERTISEMENT

ದೊಡ್ಡ ಹುಸೇನ್‌ಪುರದ ಎಂಪಿಸಿಎಸ್ ನಿರ್ದೇಶಕ ಕೃಷ್ಣಪ್ಪ, ಮುಳೇಗೌಡ, ಚನ್ನರಾಯಪ್ಪ, ಪ್ರಭಾಕರ, ಹನುಮಂತರಾಯಪ್ಪ, ಗಂಗರಾಜು, ಲಕ್ಷ್ಮಿದೇವಮ್ಮ, ಚೈತ್ರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.