ADVERTISEMENT

ಗೌರಿಬಿದನೂರು | ಮನೆಯಲ್ಲಿ ಕಳ್ಳತನ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 5:40 IST
Last Updated 13 ಸೆಪ್ಟೆಂಬರ್ 2025, 5:40 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ಗೌರಿಬಿದನೂರು: ಮನೆ ಬೀಗ ಹಾಕಿಕೊಂಡು ಊರಿಗೆ ಹೋಗಿದ್ದಾಗ ಮನೆ ಬೀಗ ಒಡೆದು ಕಳ್ಳತನ ಮಾಡಿರುವ ಘಟನೆ ನಗರದ ಬಿ.ಎಚ್ ರಸ್ತೆಯಲ್ಲಿ ಮಂಗಳವಾರ ನಡೆದಿದೆ.

ಸೆಪ್ಟೆಂಬರ್ 9 ರಂದು ಸಂಜೆಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ದೊಡ್ಡ ಬಳ್ಳಾಪುರಕ್ಕೆ ಹೋಗಿ, ಬೆಳಗ್ಗೆ ಮನೆಗೆ ಬಂದು ನೋಡಿದಾಗ ಬಾಗಿಲು ತೆರೆದಿತ್ತು. ಕಳ್ಳರು ಬ್ರಾಸ್‌ಲೈಟ್ 10 ಗ್ರಾಂ, 3 ಹ್ಯಾಂಗೀಸ್, 2 ಕತ್ತಿನ ಚೈನ್, ಮಾಟಿ, ಚಿಕ್ಕ ಉಂಗುರ, ಐದು ದೊಡ್ಡ ಉಂಗುರ, ಬೆಳ್ಳಿಯ ದೀಪ, ಒಂದು ಜತೆ ಬೆಳ್ಳಿಯ ಕುಂಕುಮ ಭರಣಿ, ಬೆಳ್ಳಿಯ ಕಾಲು ಚೈನ್, ₹15,000 ಕಳ್ಳತನ ಮಾಡಿದ್ದಾರೆ ಎಂದು ಮನೆ ಮಾಲೀಕ ಮುರಳಿ ನಗರ ಠಾಣೆಗೆ ದೂರು ನೀಡಿದ್ದಾರೆ.

ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.