ಗೌರಿಬಿದನೂರು: ನಗರಸಭೆ ವ್ಯಾಪ್ತಿಯ ಮಾದನಹಳ್ಳಿ ಹಿಂಭಾಗದಲ್ಲಿ ಹಾದು ಹೋಗಿರುವ ಬೈಪಾಸ್ ರಸ್ತೆ ಬದಿಯ ಮೇಲ್ಸೇತುವೆ ಬಳಿ ಹರಿಯುವ ಉತ್ತರ ಪಿನಾಕಿನಿ ನದಿ ದಡದಲ್ಲಿ ಕಟ್ಟಡದ ಅವಶೇಷಗಳನ್ನು ಸುರಿಯಲಾಗಿದೆ.
ಇತ್ತೀಚೆಗೆ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ಹಲವು ವರ್ಷಗಳ ನಂತರ ಉತ್ತರ ಪಿನಾಕಿನಿ ನದಿ ಹರಿಯಲು ಪ್ರಾರಂಭಿಸುತ್ತಿದೆ. ಆದರೆ ಕಟ್ಟಡದ ಅವಶೇಷಗಳನ್ನು ನದಿದಂಡೆಯಲ್ಲಿ ವಿಲೇವಾರಿ ಮಾಡುತ್ತಿರುವುದು ನದಿ ಹರಿವಿಗೆ ತಡೆಯೊಡ್ದುವುದು ಒಂದೆಡೆಯಾದರೆ ಪರಿಸರಕ್ಕೂ ಮಾರಕವಾಗಿ ಪರಿಣಮಿಸಿದೆ.
ನದಿ ದಂಡೆಯಲ್ಲೇ ಕಟ್ಟಡದ ಅವಶೇಷಗಳು ಹಾಗೂ ತ್ಯಾಜ್ಯ ಸುರಿಯುವುದರಿಂದ ನದಿಮೂಲಕ್ಕೆ ಪೆಟ್ಟು ನೀಡುವುದಲ್ಲದೆ, ಜಲಚರಗಳ ಜೀವಕ್ಕೂ ಕುತ್ತು ತಂದಿದೆ. ಇದು ಪರಿಸರದ ಮೇಲೆ ನೇರ ದುಷ್ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ಹೇಳಿದರು.
ನದಿ ದಂಡೆಯಲ್ಲಿ ಕಟ್ಟಡದ ಅವಶೇಷ ಸುರಿಯುವುದರಿಂದ ವಾತಾವರಣ ಕಲುಷಿತಗೊಳ್ಳುತ್ತಿದೆ. ಇದರಿಂದ ನದಿಮೂಲಕ್ಕೂ ಹೊಡೆತ ಬೀಳುತ್ತಿದೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.