ADVERTISEMENT

ಗೌರಿಬಿದನೂರು | ಶಿಕ್ಷಕರಿಂದ ವಿದ್ಯಾರ್ಥಿಗೆ ಪ್ರಜ್ಞೆ ತಪ್ಪುವಂತೆ ಥಳಿತ: ಆರೋಪ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 5:49 IST
Last Updated 7 ಫೆಬ್ರುವರಿ 2026, 5:49 IST
ಥಳಿತಕ್ಕೆ ಒಳಗಾದ ವಿದ್ಯಾರ್ಥಿ ಸುಶಾಂತ್.
ಥಳಿತಕ್ಕೆ ಒಳಗಾದ ವಿದ್ಯಾರ್ಥಿ ಸುಶಾಂತ್.   

ಗೌರಿಬಿದನೂರು: ನಗರದ ವಿದ್ಯಾನಿಧಿ ಶಾಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಶಿಕ್ಷಕರು ವಿದ್ಯಾರ್ಥಿಯೊಬ್ಬನನ್ನು ಶುಕ್ರವಾರ ಪ್ರಜ್ಞೆ ತಪ್ಪುವಂತೆ ಥಳಿಸಿದ್ದಾರೆ. 

8ನೇ ತರಗತಿಯಲ್ಲಿ ಓದುತ್ತಿರುವ ಸುಶಾಂತ್ ಪಕ್ಕದ ವಿದ್ಯಾರ್ಥಿ ಪುಸ್ತಕದಲ್ಲಿನ ಹಾಳೆ ಹಾರಿದ್ದಾನೆ ಎಂಬ ಕಾರಣಕ್ಕೆ ಐದಾರು ಶಿಕ್ಷಕರು ಒಬ್ಬರ ನಂತರ ಮತ್ತೊಬ್ಬರು  ಥಳಿಸಿದ್ದಾರೆ.

ತಾನು ಹಾಳೆ ಹರಿದಿಲ್ಲ ಎಂದು ವಿದ್ಯಾರ್ಥಿ ಗೋಗರೆದರೂ, ಕೇಳದ ಶಿಕ್ಷಕರು ಪ್ರಜ್ಞೆ ತಪ್ಪುವಂತೆ ಹೊಡೆದಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಾಗ ಗಾಬರಿಗೊಂಡ ಶಾಲಾ ಆಡಳಿತ ಮಂಡಳಿಯವರು ಶಾಲಾ ವಾಹನದಲ್ಲೇ ನಗರದ ಮಾನಸ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. 

ADVERTISEMENT

ಚಿಕಿತ್ಸೆ ಬಳಿಕ ಸಂಜೆ ಮಾತನಾಡಿದ ವಿದ್ಯಾರ್ಥಿ ಸುಶಾಂತ್, ‘ನನ್ನ ಪಕ್ಕದ ವಿದ್ಯಾರ್ಥಿ ಪುಸ್ತಕದಲ್ಲಿ ಹೋಮ್ ವರ್ಕ್ ನೋಡಿಕೊಂಡು ಬರೆಯುತ್ತಿದ್ದೆ. ಆದರೆ, ಶಿಕ್ಷಕರು ನಾನು ಬೇರೊಬ್ಬರ ಪುಸ್ತಕ ಹಾಳೆ ಹರಿದಿದ್ದೇನೆ ಎಂದು ಹೇಳಿ ಮನಸ್ಸಿಗೆ ಬಂದಂತೆ ಹೊಡೆದಿದ್ದಾರೆ. ಆದರೆ, ನಾನು ಯಾರ ಪುಸ್ತಕ ಹಾಳೆಯನ್ನು ಹರಿದಿಲ್ಲ’ ಎಂದು ಹೇಳಿದ್ದಾನೆ. 

ಈ ಕುರಿತು ಪ್ರಕರಣ ದಾಖಲಿಸುವುದಾಗಿ ಬಾಲಕನ ತಾಯಿ ಕವಿತಾ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.