ADVERTISEMENT

ಗೌರಿಬಿದನೂರು: ಚಿನ್ನದ ಸರ ಕಸಿದು ಪರಾರಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 6:49 IST
Last Updated 16 ಜನವರಿ 2026, 6:49 IST
<div class="paragraphs"><p>ಚಿನ್ನದ ಸರ (ಪ್ರಾತಿನಿಧಿಕ ಚಿತ್ರ)&nbsp;</p></div>

ಚಿನ್ನದ ಸರ (ಪ್ರಾತಿನಿಧಿಕ ಚಿತ್ರ) 

   

ಗೌರಿಬಿದನೂರು: ನಗರದ ಶ್ರೀನಗರ ಬಡಾವಣೆಯಲ್ಲಿ ಸಂಕ್ರಾಂತಿ ಹಬ್ಬದ ದಿನವೇ ಕಳ್ಳರು ಕೈಚಳಕ ತೋರಿಸಿದ್ದಾರೆ.

ಚಂದ್ರಲೀಲಾ ಎಂಬುವವರು ಬೆಳಗ್ಗೆ ಹಾಲು ತರಲು ಹೋಗುತ್ತಿದ್ದಾಗ ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು, ಆಕೆಯ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರವನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಮಹಿಳೆ ಪ್ರತಿರೋಧ ತೋರಿ ಕಿರುಚಾಡಿದ್ದರಿಂದ ಕಳ್ಳರ ಕೈಗೆ 20ಗ್ರಾಂ ನಷ್ಟು ಚಿನ್ನದ ಸರ ಮಾತ್ರ ಸಿಕ್ಕಿದ್ದು ಅದನ್ನೇ ಕಸಿದುಕೊಂಡು ಪರಾರಿಯಾಗಿದ್ದಾರೆ.

ADVERTISEMENT

ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೋಲಿಸ್ ಅಧೀಕ್ಷಕ ಜಗನ್ನಾಥ್ ರೈ, ಡಿವೈಎಸ್ಪಿಪ್ರಕಾಶ್ರೆಡ್ಡಿ, ನಗರ ಠಾಣೆ ಪಿಎಸ್ಐಗೋಪಾಲ್, ಗ್ರಾಮಾಂತರ ಠಾಣೆ ಪಿಎಸ್ಐರಮೇಶ್ ಗುಗ್ಗರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ
ಮುಂದುವರೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.